ಬೆಂಗಳೂರು: ನಟಿ ರನ್ಯಾ ಚಿನ್ನದ ಬಿಸ್ಕತ್ತ್ ಕಳ್ಳ ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿಗೆ ಸಾಮಾಜಿಕ ಕಾರ್ಯಕರ್ತ ತೇಜಸ್ ಗೌಡ ದೂರು ನೀಡಿದ್ದಾರೆ.
ರನ್ಯ ರಾವ್ ಪ್ರಕರಣದಲ್ಲಿ ಕೋಟ್ಯಾಂತರ ರೂ. ಹಣದ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಸುವಂತೆ ದೂರು ದಾಖಲಿಸಿದ್ದಾರೆ.
ಇದು ಎರಡು ದೇಶಗಳ ನಡುವೆ ನಡೆದಿರುವ ಚಿನ್ನದ ಕಳ್ಶಸಾಗಾಣೆ ದಂಧೆ. ಈ ಮಾಫಿಯಾ ಹಿಂದೆ ದೊಡ್ಡ ದೊಡ್ಡ ರಾಜಕಾರಣಿ ಗಳು ಇರುವ ಶಂಕೆ ಇದೆ. ಹೀಗಾಗಿ ಈ ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸಬೇಕು. ಆಗ ಮಾತ್ರ ಇದರ ಸತ್ಯ ಹೊರ ಬರಲಿದೆ ಎಂದು ಮನವಿ ಮಾಡಿದ್ದಾರೆ.