ಬೆಂಗಳೂರು: ನಟಿ ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ಬಗೆದಷ್ಟು ಬಯಲಾಗುತ್ತಿದೆ. ಸಿನಿಮಾ ಮರು ಪ್ರವೇಶದ ಆಸೆಗೆ ಬಿದ್ದು ರನ್ಯಾ ಟ್ರ್ಯಾಪ್ ಆದ್ರಾ? ಎಂಬ ಅನುಮಾನ ಈಗ ಎಲ್ಲರನ್ನೂ ಕಾಡುತ್ತಿದೆ.
KGF ರೀತಿ ದೊಡ್ಡ ಫಿಲ್ಮ್ ನಲ್ಲಿ ಹೂಡಿಕೆ ಮಾಡುವ ಆಮಿಷವೊಡ್ಡಿ ಟ್ರ್ಯಾಪ್ ಮಾಡಿರಬಹುದಾ? ಉದ್ಯಮಿ ಮೊಮ್ಮಗ ತರುಣ್ ರಾಜ್ ಮಾತಿಗೆ ಒಳಗಾಗಿ ಅಡ್ಡದಾರಿ ಹಿಡಿದ್ಲಾ? ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಮಾಣಿಕ್ಯ, ಪಟಾಕಿ ಚಿತ್ರಗಳಲ್ಲಿ ಮಿಂಚಿ ರನ್ಯಾ ತೆರೆ ಮರೆಗೆ ಸರಿದಿದ್ದರು. ಆದರೆ, ಮತ್ತೆ ನಿರ್ಮಾಪಕಿಯಾಗಿ ಚಿತ್ರರಂಗ ಪ್ರವೇಶಿಸುವ ಕನಸು ಕಾಣುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡಿರುವ ಜಾಲ, ಸಿನಿಮಾಗೆ ಚಿನ್ನ ಕಳ್ಳ ಸಾಗಣೆ ಜಾಲದ ಆಮಿಷವೊಡ್ಡಿದರಾ? ಎಂಬ ಸಂಶಯ ವ್ಯಕ್ತವಾಗುತ್ತಿದೆ.
ಹೀಗಾಗಿ ರನ್ಯಾ ರಾವ್ ಚಿನ್ನ ಸ್ಮಗ್ಲಿಂಗ್ ಕೃತ್ಯಕ್ಕೆ ಇಳಿದಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಈಗ ಗುಪ್ತಚರ ನಿರ್ದೇಶನಾಲಯದ ತನಿಖೆಯಲ್ಲಿ ‘ವೀಸಾ’ ರಹಸ್ಯ ಬಯಲಾಗಿದ್ದು, 80 ಲಕ್ಷ ರೂ. ಕೊಟ್ಟು ದುಬೈನ ರೆಸಿಡೆಂಟ್ ವೀಸಾವನ್ನು ರನ್ಯಾ ಪಡೆದಿದ್ದಳು ಎನ್ನಲಾಗಿದೆ. ಹೀಗಾಗಿ ಚಿನ್ನ ಕಳ್ಳ ಸಾಗಣೆಕೆಗಾಗಿಯೇ 80 ಲಕ್ಷ ರೂ. ಕೊಟ್ಟು ದುಬೈ ವೀಸಾ ಪಡೆದರಾ? ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಹೀಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಆರ್ ಐ ಪೊಲೀಸರು ಒಂದೊಂದೇ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮತ್ತೊಂದೆಡೆ ರನ್ಯಾ ರಾವ್ ಪ್ರಕರಣದಲ್ಲಿ ಪೊಲೀಸ್ ಕರ್ತವ್ಯ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಸಿಐಡಿ ತನಿಖೆ ನಡೆಸಿ ವಾರದಲ್ಲಿ ವರದಿ ನೀಡುವಂತೆ ಸೂಚಿಸಿದೆ. ಈ ವಿಚಾರವಾಗಿ ಈಗಾಗಲೇ ಸಿಎಂ – ಡಿಸಿಎಂ ಚರ್ಚೆ ನಡೆಸಿದ್ದಾರೆ. ಐಪಿಎಸ್ ರಾಮಚಂದ್ರರಾವ್ ಪಾತ್ರದ ಬಗ್ಗೆಯೂ ಸಮಗ್ರ ತನಿಖೆಗೆ ಸೂಚಿಸಲಾಗಿದೆ.