ಬೆಂಗಳೂರು: ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಹೊರ ಬಿದ್ದಿದ್ದು, ಚಿನ್ನ ಸ್ಮಗ್ಲಿಂಗ್ ಸಿಂಡಿಕೇಟ್ಗೆ ತರುಣ್ ಮುಖ್ಯ ಕಿಂಗ್ ಪಿನ್ ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ DRI ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಒಂದೊಂದೇ ಸ್ಫೋಟಕ ಮಾಹಿತಿ ಹೊರ ಬೀಳುತ್ತಿವೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಆರ್ ಐ ಅಧಿಕಾರಿಗಳು ಉದ್ಯಮಿ ಮೊಮ್ಮಗ ತರುಣ್ ನನ್ನು ಬಂಧಿಸಿ ಡ್ರಿಲ್ ನಡೆಸಿದ್ದಾರೆ.
ಬಂಧಿತ ತರುಣ್ ದುಬೈ ಮಹಾನಗರದಲ್ಲಿ ಹಲವರೊಂದಿಗೆ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ. ಸಿಂಡಿಕೇಟ್ ಸದಸ್ಯರಿಗೆ ಈತನೇ ನೇರ ಕಾಂಟ್ಯಾಕ್ಟ್ ಇರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ತರುಣ್ ಮೊಬೈಲ್, ಲ್ಯಾಪ್ ಟಾಪ್, ಟ್ಯಾಬ್ ವಶಕ್ಕೆ ಪಡೆದು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಎಲ್ಲವನ್ನೂ FSLಗೆ ಕಳಿಸಿ ರಿಟ್ರೀವ್ಗೆ ಡಿಆರ್ ಐ ಅಧಿಕಾರಿಗಳು ಮುಂದಾಗಿದ್ದಾರೆ. ಇನ್ನೊಂದೆಡೆ ತರುಣ್ ಮನೆ ಸೇರಿದಂತೆ ಆತ ಸತತವಾಗಿ ಭೇಟಿ ನೀಡುತ್ತಿದ್ದ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಆತ ರನ್ಯಾ ಬಿಟ್ಟು ಬೇರೆ ಯಾರೊಂದಿಗೆ ಸಂಪರ್ಕದಲ್ಲಿದ್ದ ಎಂಬುವುದರ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. DRI, CBI, ಸಿಐಡಿ ಅಧಿಕಾರಿಗಳ ತಂಡಗಳು ತನಿಖೆ ಮುಂದುವರೆಸಿದ್ದಾರೆ.