ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಹೊರ ಬಂದ ನಂತರ ಕುಟುಂಬವಾಯಿತು. ತಾವಾಯಿತು ಅಂತಾ ಇದ್ದ ದಾಸ ಈಗ ಸಿನಿಮಾ ಅಖಾಡಕ್ಕೂ ಇಳಿಯುತ್ತಿದ್ದಾರೆ. ಈ ಮಧ್ಯೆ ಅವರು ತಮ್ಮವರನ್ನೆಲ್ಲ ದೂರ ಮಾಡಿದರೆ? ಎಂಬ ಅನುಮಾನವೊಂದು ಕಾಡುತ್ತಿದೆ.
ಹೌದು. ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ದರ್ಶನ್ 6 ಜನರನ್ನು ಮಾತ್ರ ಇಲ್ಲಿಯವರೆಗೆ ಫಾಲೋ ಮಾಡುತ್ತಿದ್ದರು. ಮದರ್ ಇಂಡಿಯಾ ಸುಮಲತಾ ಅಂಬರೀಶ್, ಸಹೋದರ ಸಮಾನ ಅಭಿಷೇಕ್ ಅಂಬರೀಶ್, ಅಭಿಷೇಕ್ ಪತ್ನಿ ಅವಿವಾ, ಅಧಿಕೃತ ಫ್ಯಾನ್ಸ್ ಪೇಜ್ ಡಿ ಕಂಪೆನಿ ಹಾಗೂ ಸಹೋದರ ದಿನಕರ್, ಪುತ್ರ ವಿನೀಶ್ ರನ್ನು ಫಾಲೋ ಮಾಡುತ್ತಿದ್ದರು. ಆದರೆ, ಈಗ ಏಕಾಏಕಿ ಎಲ್ಲರನ್ನೂ ಅನ್ ಫಾಲೋ ಮಾಡಿದ್ದಾರೆ. ಹೀಗಾಗಿ ದಾಸನ ಫಾಲೋ ಮಾಡುವವರ ಸಂಖ್ಯೆ ʻ0ʼ ಆಗಿದೆ. ಈ ನಿರ್ಧಾರದ ಹಿಂದಿನ ಸತ್ಯ ಏನು ಎಂಬುವುದು ಮಾತ್ರ ಬಹಿರಂಗವಾಗಿಲ್ಲ. ಈ ಕುರಿತು ಅಭಿಮಾನಿಗಳು ತಲೆ ಕೆರೆದುಕೊಳ್ಳುತ್ತಿದ್ದಾರೆ.

ಮೈಸೂರಿನಲ್ಲಿ ‘ದಿ ಡೆವಿಲ್’ ಚಿತ್ರದ ಶೂಟಿಂಗ್ ಮಾರ್ಚ್ 12ರಿಂದ 15ರ ವರೆಗೆ ನಡೆಯಲಿದೆ. ಮಾ.12ರಿಂದ ಮಾ.14ರವರೆಗೆ ಸರ್ಕಾರಿ ಅಥಿತಿ ಗೃಹದಲ್ಲಿ ಚಿತ್ರತಂಡ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಶೂಟಿಂಗ್ ನಡೆಸಲಿದೆ. ನಂತರ ಮಾ.15ರಂದು ಲಲಿತಮಹಲ್ ಪ್ಯಾಲೆಸ್‌ನಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಚಿತ್ರೀಕರಣ ನಡೆಯಲಿದೆ ಎಂದು ತಿಳಿದು ಬಂದಿದೆ. ಚಿತ್ರೀಕರಣದ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ಕೂಡ ಕಲ್ಪಿಸಲಾಗುತ್ತಿದೆ.