ಬೆಂಗಳೂರು: ಡಿ ಕೆ ಸುರೇಶ್ (DK Suresh) ನಕಲಿ ಸಹೋದರಿ ಐಶ್ವರ್ಯ ಗೌಡ (Aishwarya Gowda) ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಶಾಸಕ ವಿನಯ್ ಕುಲಕರ್ಣಿಗೆ ಸಂಕಷ್ಟ ಶುರುವಾಗಿದೆ ಎನ್ನಲಾಗುತ್ತಿದೆ.
ಚಿನ್ನ (Gold) ಪಡೆದು ಹಣ ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಕಾರನ್ನು (Car) ಪೊಲೀಸರು ಸೀಜ್ ಮಾಡಿದ್ದಾರೆ. ಆ ಕಾರನ್ನು ಮಾಜಿ ಸಚಿವ ವಿನಯ್ ಕುಲಕರ್ಣಿ (Vinay Kulkarni) ಬಳಸುತ್ತಿದ್ದರು. ಸದ್ಯ ವಿನಯ್ ಕುಲಕರ್ಣಿ ಕಾರು ಚಾಲಕನ ವಿಚಾರಣೆ ನಡೆಸಿದ ಪೊಲೀಸರಿಗೆ, ಕೆಲವು ವಿಷಯಗಳು ಗೊತ್ತಾಗಿವೆ ಎನ್ನಲಾಗಿದೆ.
ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಕಾರು ಚಾಲಕ ವೀರೇಶ್ ದಳವಾಯಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವಿಚಾರಣೆಯನ್ನು ಎಸಿಪಿ ಭರತ್ ರೆಡ್ಡಿ ನಡೆಸಿದ್ದರು. ಐಶ್ವರ್ಯ ಗೌಡಗೆ ಸೇರಿದ ಬೆನ್ಜ್ ಕಾರು ವಿನಯ್ ಕುಲಕರ್ಣಿ ಮನೆಯಲ್ಲಿ ಪತ್ತೆಯಾಗಿದ್ದರಿಂದ ಚಾಲಕನನ್ನು ವಿಚಾರಣೆಗೆ ಕರೆಯಲಾಗಿತ್ತು.
ವಿಚಾರಣೆ ವೇಳೆ ಚಾಲಕ ವೀರೇಶ್, ಐಶ್ವರ್ಯ ಗೌಡ ಅವರು ವಿನಯ್ ಕುಲಕರ್ಣಿ ಅವರನ್ನು ಪರಿಚಯಸ್ಥರು ಎಂದಿದ್ದರು. ಐಶ್ವರ್ಯ ಗೌಡ ಈ ಹಿಂದೆ ಮಹಾರಾಷ್ಟ್ರಕ್ಕೆ ಹೋಗಿದ್ದಳು. ಈ ವೇಳೆ ರಾತ್ರಿ ವಿನಯ್ ಕುಲಕರ್ಣಿ ನಿವಾಸಕ್ಕೆ ಆಡಿ ಕಾರಿನಲ್ಲಿ ಬಂದಿದ್ದರು. ನಂತರ ಕಾರು ಬಿಟ್ಟು, ವಿಮಾನದಲ್ಲಿ ಹೋಗಿದ್ದರು ಎಂದು ಹೇಳಿದ್ದಾನೆ ಎಂದು ತಿಳಿದು ಬಂದಿದೆ.
ಐಶ್ವರ್ಯಗೌಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ವೇಳೆ ಆಡಿ, ಬೆಂಜ್ , ಫಾರ್ಚುನಾರ್ ಕಾರುಗಳನ್ನು ಜಪ್ತಿ ಮಾಡಿದ್ದರು. ಐಶ್ವರ್ಯ ಗೌಡಳ ವಂಚನೆ ಪ್ರಕರಣದ ಕೊನೆ ಹಂತದ ತನಿಖೆ ನಡೆಸುತ್ತಿರುವ ಪೊಲೀಸರು, ಶೀಘ್ರದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ.