ರಾವಲ್ಪಿಂಡಿ: ನ್ಯೂಜಿಲೆಂಡ್ ಆಟಗಾರ ರಚಿನ್ ರವೀಂದ್ರ (Rachin Ravindra) ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನ ಪ್ರಭಾವ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅವರು 2025 ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ತಂಡದ ಪರ ಶತಕ ಬಾರಿಸಿದರು. ಬುಧವಾರ, ಮಾರ್ಚ್ 5ರಂದು ಲಾಹೋರ್‌ನಲ್ಲಿ ನಡೆದ ಈ ಪಂದ್ಯದಲ್ಲಿ ರವೀಂದ್ರ 93 ಎಸೆತಗಳಲ್ಲಿ ಶತಕ ಸಾಧಿಸಿದರು. ಇದು ರಚಿನ್ ಅವರ ಐದನೇ ಏಕದಿನ ಶತಕವಾಗಿದ್ದು, ಐದು ಶತಕಗಳೂ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೂರ್ನಮೆಂಟ್‌ಗಳಲ್ಲಿ ಬಂದಿವೆ ಎಂಬುದು ವಿಶೇಷ.
RACHIN RAVINDRA
— MK 🇮🇳🌝 (@82atmelbourne) March 5, 2025
– Century in CWC debut
– Century in CT debut
– Century in CT semi final
– 5 hundreds in ICC tournaments
– 2 centuries coming back from injury
– just 25 years old
– plays for the best team in IPL
– under the guidance of MSD during IPL pic.twitter.com/NVktPFdHIz
ರಚಿನ್ ಚಾಂಪಿಯನ್ಸ್ ಟ್ರೋಫಿಯ ಒಂದು ಆವೃತ್ತಿಯಲ್ಲಿ ಒಂದಕ್ಕಿಂತ ಹೆಚ್ಚು ಶತಕ ಬಾರಿಸಿದ ಎಂಟನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅವರು ಕ್ರಿಸ್ ಗೇಲ್, ಸೌರವ್ ಗಂಗೂಲಿ, ಸಯೀದ್ ಅನ್ವರ್ ಮತ್ತು ಶಿಖರ್ ಧವನ್ ಅವರಂತಹ ದಿಗ್ಗಜ ಆಟಗಾರರ ಪಟ್ಟಿ ಸೇರಿದ್ದಾರೆ.
ಸೌರವ್ ಗಂಗೂಲಿ 2000ರಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಎರಡು ಶತಕ ಬಾರಿಸಿದ್ದರು, ಹಾಗೆಯೇ ಶಿಖರ್ ಧವನ್ 2015ರಲ್ಲಿ ಎರಡು ಶತಕಗಳ ಸಾಧನೆ ಮಾಡಿದ್ದರು. ರಚಿನ್ ರವೀಂದ್ರ 2025 ಚಾಂಪಿಯನ್ಸ್ ಟ್ರೋಫಿಯಲ್ಲಿ ತಮ್ಮ ಮೊದಲ ಶತಕವನ್ನು ಫೆಬ್ರವರಿಯಲ್ಲಿ ಬಾಂಗ್ಲಾದೇಶ ವಿರುದ್ಧ ಗಳಿಸಿದ್ದರು.
ಇದನ್ನೂ ಓದಿ: S Jaishankar: ಲಂಡನ್ ನಲ್ಲಿ ಸಚಿವ ಜೈಶಂಕರ್ ಮೇಲೆ ದಾಳಿಗೆ ಯತ್ನಿಸಿದ ಖಲಿಸ್ತಾನಿಗಳು; Video ಇಲ್ಲಿದೆ
ರಚಿನ್ ರವೀಂದ್ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಂದಕ್ಕಿಂತ ಹೆಚ್ಚು ಶತಕ ಬಾರಿಸಿದ ನ್ಯೂಜಿಲ್ಯಾಂಡ್‌ನ ಮೊದಲ ಬ್ಯಾಟರ್ ಆಗಿದ್ದಾರೆ. ಈ ಎಡಗೈ ಬ್ಯಾಟ್ಸ್‌ಮನ್ 2023ರಲ್ಲಿ ಭಾರತದಲ್ಲಿ ನಡೆದ ತಮ್ಮ ಪದಾರ್ಪಣೆ ಏಕದಿನ ವಿಶ್ವಕಪ್‌ನಲ್ಲಿ ನಾಲ್ಕು ಶತಕಗಳನ್ನು ಬಾರಿಸಿ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಭರ್ಜರಿಯಾಗಿ ಪ್ರವೇಶಿಸಿದರು.
24 ವರ್ಷದ ರಚಿನ್ ಈಗಾಗಲೇ ಐಸಿಸಿ ಟೂರ್ನಮೆಂಟ್‌ಗಳಲ್ಲಿ ನ್ಯೂಜಿಲ್ಯಾಂಡ್ ಪರ ಅತಿಹೆಚ್ಚು ಏಕದಿನ ಶತಕ ಗಳಿಸಿದ ಕ್ರಿಕೆಟಿಗ ಎಂಬ ದಾಖಲೆಯನ್ನು ಹೊಂದಿದ್ದಾರೆ. ಅವರ ಶತಕಗಳ ಸಂಖ್ಯೆ 5. ಇದು ಕೇನ್ ವಿಲಿಯಂಸನ್ ಮತ್ತು ನಾಥನ್ ಅಸ್ಟಲ್ ಅವರಿಗಿಂತ ಎರಡು ಹೆಚ್ಚು.
ಚಾಂಪಿಯನ್ಸ್ ಟ್ರೋಫಿ ಒಂದು ಆವೃತ್ತಿಯಲ್ಲಿ ಅತಿಹೆಚ್ಚು ಶತಕಗಳ ಸಾಧನೆ
ಕ್ರಿಸ್ ಗೇಲ್ – 3 (2006)
ಸೌರವ್ ಗಂಗೂಲಿ – 2 (2000)
ಸಯೀದ್ ಅನ್ವರ್ – 2 (2000)
ಹರ್ಷಲ್ ಗಿಬ್ಸ್ – 2 (2002)
ಉಪುಲ್ ತರಂಗಾ – 2 (2006)
ಶೇನ್ ವಾಟ್ಸನ್ – 2 (2009)
ಶಿಖರ್ ಧವನ್ – 2 (2013)
ರಚಿನ್ ರವೀಂದ್ರ – 2 (2025)
ರಚಿನ್ ಮತ್ತೊಮ್ಮೆ ಕ್ಲಾಸ್ ಆಟಕ್ಕೆ ಮರಳಿದ್ದಾರೆ.. ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ಬ್ಯಾಟಿಂಗ್ ಸ್ನೇಹಿ ಪರಿಸ್ಥಿತಿಗಳನ್ನು ಬಳಸಿಕೊಂಡಿತು. ಅಂತೆಯೇ ಎಡಗೈ ಬ್ಯಾಟ್ಸ್ಮನ್ ದಕ್ಷಿಣ ಆಫ್ರಿಕಾದ ವೇಗದ ದಾಳಿಯನ್ನು ಪುಡಿಗಟ್ಟಿದರು.
ದಕ್ಷಿಣ ಆಫ್ರಿಕಾದ ಉತ್ತಮ ವೇಗದ ವಿರುದ್ಧ ಆರಾಮದಾಯಕವಾಗಿ ಆಡಿದರು. ಬೌನ್ಸ್ ಅನ್ನು ಚೆನ್ನಾಗಿ ನಿಭಾಯಿಸಿದರು ಮತ್ತು ಅಗತ್ಯಕ್ಕೆ ತಕ್ಕ ಹಾಗೆ ಬೌಂಡರಿಗಳನ್ನು ಬಾರಿಸಿದರು. ಲುಂಗಿ ಎನ್ಗಿಡಿ ಅವರ ವೇಗದ ಬದಲಾವಣೆ ಕೆಲವೊಮ್ಮೆ ಅವರನ್ನು ತೊಂದರೆಗೊಳಿಸಿದವು. ಆದರೆ ರಚಿನ್ ಬಲಿಷ್ಠವಾಗಿ ನಿಂತು ಆಡಿದರು.