ಲಂಡನ್: ಭಾರತದ ವಿರುದ್ಧ ಖಲಿಸ್ತಾನಿ ಉಗ್ರ ಸಂಘಟನೆಯ ಷಡ್ಯಂತ್ರ ಮುಂದುವರಿದಿದೆ. ಲಂಡನ್ ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಂಶಕರ್ (S Jaishankar) ಅವರ ಮೇಲೆಯೇ ಖಲಿಸ್ತಾನಿ ಉಗ್ರರು ದಾಳಿ ಮಾಡಲು ಯತ್ನಿಸಿದ್ದಾರೆ. ಅಲ್ಲದೆ, ಭಾರತದ ಧ್ವಜವನ್ನು ಹರಿಯುವ ಮೂಲಕ ಖಲಿಸ್ತಾನಿ ಉಗ್ರರು ಹೀನ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ.
ಇದರೊಂದಿಗೆ ಎಸ್ ಜೈಶಂಕರ್ ಅವರಿಗೆ ಬ್ರಿಟನ್ ನಲ್ಲಿ ಭಾರಿ ಭದ್ರತಾ ಲೋಪ ಉಂಟಾದಂತಾಗಿದೆ. ಲಂಡನ್ನ ಚಾಥಮ್ ಹೌಸ್ ಚಿಂತಕರ ಚಾವಡಿಯಲ್ಲಿ ಭಾಗವಹಿಸಿದ ಜೈಶಂಕರ್ ಅವರು ಹಿಂತಿರುಗಲು ಮುಂದಾದರು. ಕಾರು ಹತ್ತುವ ವೇಳೆ ಖಲಿಸ್ತಾನಿ ಉಗ್ರನೊಬ್ಬ ಎಸ್. ಜೈಶಂಕರ್ ಅವರತ್ತ ಓಡಿ ಬಂದಿದ್ದಾನೆ. ಅಲ್ಲದೆ, ಭಾರತದ ಧ್ವಜವನ್ನು ಹರಿದು ಉದ್ಧಟತನ ಪ್ರದರ್ಶಿಸಿದ್ದಾನೆ.
BREAKING: Khalistan supporters in London, U.K., heckled India’s Minister of External Affairs, Dr. Subrahmanyam Jaishankar, and his envoy. A passerby made an obscene gesture toward them.
— Mocha Bezirgan 🇨🇦 (@BezirganMocha) March 5, 2025
The group accuses the minister and his government of assassinating their members and is… pic.twitter.com/QARU3sJbGI
ಇದಾದ ಕೂಡಲೇ ಪೊಲೀಸರು ಖಲಿಸ್ತಾನಿಯನ್ನು ಬಂಧಿಸಿದ್ದಾರೆ. ಇನ್ನು ಲಂಡನ್ ನಲ್ಲಿ ಭಾರತದ ಸಚಿವರೊಬ್ಬರ ಮೇಲೆ ಖಲಿಸ್ತಾನಿ ಉಗ್ರರು ದಾಳಿ ಮಾಡಲು ಯತ್ನಿಸಿರುವುದನ್ನು ಭಾರತ ಖಂಡಿಸಿದೆ. ಇದರ ಕುರಿತು ಬ್ರಿಟನ್ ಉನ್ನತ ತನಿಖೆ ನಡೆಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಕೆನಡಾ ಸೇರಿ ಹಲವೆಡೆ ಖಲಿಸ್ತಾನಿ ಉಗ್ರರು ಹತ್ಯೆಗೀಡಾಗಿರುವುದರ ಹಿಂದೆ ಭಾರತದ ಕೈವಾಡ ಇದೆ ಎಂಬುದು ಖಲಿಸ್ತಾನಿ ಉಗ್ರರ ನಂಬಿಕೆಯಾಗಿದೆ. ಮೊದಲಿನಿಂದಲೂ ಖಲಿಸ್ತಾನಿಗಳು ಭಾರತದ ವಿರುದ್ಧ ಚಟುವಟಿಕೆಗಳನ್ನು ಕೈಗೊಳ್ಳುತ್ತಲೇ ಬಂದಿದ್ದಾರೆ. ಲಂಡನ್, ಕೆನಡಾ ಸೇರಿ ಹಲವು ದೇಶಗಳಲ್ಲಿ ಇವರು ಭಾರತ ವಿರೋಧಿ ಕೃತ್ಯಗಳನ್ನು ಎಸಗುತ್ತಲೇ ಇರುತ್ತಾರೆ.
ಪಾಕ್ ವಿರುದ್ಧ ಆಕ್ರೋಶ
ಲಂಡನ್ನ ಚಾಥಮ್ ಹೌಸ್ ಚಿಂತಕರ ಚಾವಡಿಯಲ್ಲಿ ಜೈಶಂಕರ್ ಭಾಗವಹಿಸಿದರು. ಇದೇ ವೇಳೆ ಅವರು ಭಾರತದ ವಿಷಯದಲ್ಲಿ ಮೂರನೇಯವರ ಹಸ್ತಕ್ಷೇಪವನ್ನು ತಿರಸ್ಕರಿಸಿದರು. “ಕಾಶ್ಮೀರದಲ್ಲಿ 370 ನೇ ವಿಧಿಯನ್ನು ತೆಗೆದುಹಾಕುವುದು ಒಂದು ಹೆಜ್ಜೆ ಎಂದು ನಾನು ಭಾವಿಸುತ್ತೇನೆ. ನಂತರ, ಕಾಶ್ಮೀರದಲ್ಲಿ ಬೆಳವಣಿಗೆ, ಆರ್ಥಿಕ ಚಟುವಟಿಕೆ ಮತ್ತು ಸಾಮಾಜಿಕ ನ್ಯಾಯವನ್ನು ಪುನಃಸ್ಥಾಪಿಸುವುದು ಎರಡನೇ ಹೆಜ್ಜೆಯಾಗಿತ್ತು. ಅತಿ ಹೆಚ್ಚಿನ ಮತದಾನದೊಂದಿಗೆ ನಡೆದ ಚುನಾವಣೆಗಳನ್ನು ನಡೆಸುವುದು ಮೂರನೇ ಹೆಜ್ಜೆಯಾಗಿತ್ತು ಎಂದು ಅವರು ಹೇಳಿದರು.
ನಾವು ಪಾಕಿಸ್ತಾನವು ಕದ್ದ ಕಾಶ್ಮೀರದ ಭಾಗವನ್ನು ಹಿಂದಿರುಗಿಸುವಿಕೆಗಾಗಿ ಕಾಯುತ್ತಿದ್ದೇವೆ. ಅದು ನಡೆದರೆ ಕಾಶ್ಮೀರದ ಸಮಸ್ಯೆ ಬಗೆಹರಿದಂತಾಗುತ್ತದೆ. ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವೆ ಶ್ವೇತಭವನದಲ್ಲಿ ನಡೆದ ಚರ್ಚೆಯ ನಂತರ, ಭಾರತ ಮತ್ತು ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಅಗತ್ಯವನ್ನು ಒಪ್ಪಿಕೊಂಡಿವೆ ಎಂದು ಜೈಶಂಕರ್ ತಿಳಿಸಿದರು.