ದುಬೈ: ಇಲ್ಲಿನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ (ಮಾರ್ಚ್ 2) ನಡೆದ ಚಾಂಪಿಯನ್ಸ್ ಟ್ರೋಫಿ 2025 ಲೀಗ್ ಹಂತದ ಕೊನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಶ್ರೇಯಸ್ ಅಯ್ಯರ್ (Shreyas Iyer) ನಿರ್ಣಾಯಕ ಅರ್ಧಶತಕ ಗಳಿಸಿದರು. ಮೊದಲ ಪವರ್ಪ್ಲೇನಲ್ಲಿ ಭಾರತವು ತನ್ನ ಅಗ್ರ ಮೂರು ಬ್ಯಾಟರ್ಗಳನ್ನು ಕಳೆದುಕೊಂಡಿತು. ಆದರೆ ಅಯ್ಯರ್ ಇನ್ನಿಂಗ್ಸ್ ಅನ್ನು ಮುಂದುವರಿಸಿದರು. ಸ್ಪಿನ್ ಸ್ನೇಹಿ ಟ್ರ್ಯಾಕ್ನಲ್ಲಿ ಭಾರತ ತಂಡ 9 ವಿಕೆಟ್ ನಷ್ಟಕ್ಕೆ 249 ರನ್ ಬಾರಿಸಿತು.
Shreyas Iyer No.1 Moddle Order Batter in ODI in the World. In ODI WC 2023, Iyer weakness is Short Ball. But Shreyas work hards against Short Ball.
— Vikas Yadav (@VikasYadav66200) March 3, 2025
Now Iyer plays very good against Short ball. This is identity of big player. pic.twitter.com/BFJkEduMVB
ಚಾಂಪಿಯನ್ಸ್ ಟ್ರೋಫಿಗೆ ಮುಂಚಿತವಾಗಿ ಭಾರತವು ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಿತ್ತು. ಶ್ರೇಯಸ್ ಮೊದಲ ಏಕದಿನ ಪಂದ್ಯವನ್ನು ಆಡುವ ಅವಕಾಶ ಪಡೆದರು. ವಿರಾಟ್ ಕೊಹ್ಲಿಗೆ ಕೊನೆಯ ಕ್ಷಣದಲ್ಲಿ ಗಾಯವಾದ ಕಾರಣ ಶ್ರೇಯಸ್ ಆಡುವ ಬಳಗ ಸೇರಿದರು. ಅವರು ತಮಗೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡರು. ಮೂರು ಪಂದ್ಯಗಳಲ್ಲಿ ಎರಡು ಅರ್ಧಶತಕಗಳನ್ನು ಗಳಿಸಿ ಸರಣಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದವರೆನಿಸಿಕೊಂಡರು.
ಚಾಂಪಿಯನ್ಸ್ ಟ್ರೋಫಿಯಲ್ಲಿ, ಬಾಂಗ್ಲಾದೇಶ ವಿರುದ್ಧದ ಭಾರತದ ಮೊದಲ ಪಂದ್ಯದಲ್ಲಿ ಅಗ್ಗವಾಗಿ ಔಟ್ ಆದ ನಂತರ, ಶ್ರೇಯಸ್ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಗಳಿಸಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರ ಸಾಧನೆಯನ್ನು ಹೊಗಳಿದ್ದಾರೆ. ಶ್ರೇಯಸ್ ಕಳೆದ ವರ್ಷ ಬಿಸಿಸಿಐ ಕೇಂದ್ರ ಗುತ್ತಿಗೆ ಕಳೆದುಕೊಂಡು ರಾಷ್ಟ್ರೀಯ ತಂಡದಿಂದ ಹೊರಕ್ಕೆ ಬಿದ್ದರು. ಜತೆಗೆ ಸರ್ಜರಿಯೂ ಆಗಿತ್ತು. ಎಲ್ಲವನ್ನೂ ಅವರು ಎದುರಿಸಿ ಮತ್ತೆ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ ಎಂದು ಹೇಳಿದರು.
“ಅವರು ತಮ್ಮ ಬಿಸಿಸಿಐ ಕೇಂದ್ರ ಗುತ್ತಿಗೆ ಕಳೆದುಕೊಂಡರು. ನಂತರ ಅವರನ್ನು ತಂಡದಿಂದ ತೆಗೆದುಹಾಕಲಾಯಿತು. ಅಯ್ಯರ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು. ಹೀಗಎ ಪರಿಸ್ಥಿತಿ ಅವರ ವಿರುದ್ಧವಾಗಿತ್ತು. ಆದರೆ ಉತ್ತಮ ಪ್ರದರ್ಶನದ ಮೂಲಕ ಟೀಮ್ ಇಂಡಿಯಾಕ್ಕೆ ಮರಳಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ಈಗ ಸ್ಥಿರವಾಗಿ ರನ್ ಗಳಿಸುತ್ತಿದ್ದಾರೆ,” ಎಂದು ಚೋಪ್ರಾ ಹೇಳಿದ್ದಾರೆ.
ರನ್ ಹಸಿವು ಒಳ್ಳೆಯದು: ರವಿ ಶಾಸ್ತ್ರಿ
ಭಾರತದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಕೂಡ ಶ್ರೇಯಸ್ ಅವರನ್ನು ಕೊಂಡಾಡಿದ್ದಾರೆ. ಅವರ ರನ್ ಮಾಡುವ ಛಲ ಬ್ಯಾಟಿಂಗ್ ಸ್ಥಿರತೆಯನ್ನು ಹೊಗಳಿದ್ದಾರೆ.
ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧ ‘ಚಕ್ರವರ್ತಿ’ಯಾಗಿ ಸೆಮಿಫೈನಲ್ ತಲುಪಿದ ಭಾರತ!
“ಅವರ ರನ್ ಹಸಿವು ಅತ್ಯುತ್ತಮವಾಗಿದೆ. ವಅವರು 4 ನೇ ಕ್ರಮಾಂಕದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಅವರು ಉತ್ತಮ ಇನ್ನಿಂಗ್ಸ್ಗಳನ್ನು ಆಡುತ್ತಿದ್ದಾರೆ, “ಎಂದು ಶಾಸ್ತ್ರಿ ಹೇಳಿದರು.
ಶ್ರೇಯಸ್ ಅಯ್ಯರ್ 98 ಎಸೆತಗಳಲ್ಲಿ 79 ರನ್ ಗಳಿಸಿ ಭಾರತವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ದಿದ್ದರು. ಅಲ್ಲದೆ, ಭಾರತ ತಂಡಕ್ಕೆ ಕಡಿಮೆ ಮೊತ್ತದ ಪಂದ್ಯದಲ್ಲಿ ಅತ್ಯುತ್ತಮ ಜಯ ದೊರಕಿತ್ತು.