ಬೆಂಗಳೂರು: ಚಾಂಪಿಯನ್ಸ್ ಟ್ರೋಫಿ 2025 ರ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ವಿಶೇಷವೆಂದರೆ, ಈ ಪಂದ್ಯಾವಳಿಯಲ್ಲಿ ಎರಡೂ ತಂಡಗಳು ಅಜೇಯವಾಗಿ ಉಳಿದಿವೆ. ಮೆನ್ ಇನ್ ಬ್ಲೂ ಉತ್ತಮವಾಗಿ ಕಾಣುತ್ತಿದ್ದರೆ, ಮೆನ್ ಇನ್ ಯೆಲ್ಲೋ ಕೆಲವು ಗಾಯದ ಸಮಸ್ಯೆಗಳನ್ನು ಎದುರಿಸುತ್ತಿದೆ. ಹೀಗಾಗಿ ನಾಕೌಟ್ ಪಂದ್ಯಕ್ಕೆ ಮುಂಚಿತವಾಗಿ ಆ ತಂಡದ ಸಮತೋಲನದ ಮೇಲೆ ಪರಿಣಾಮ ಬೀರಿದೆ. .
ಕೆಲವು ಅತ್ಯುತ್ತಮ ಆಟಗಾರರು ಗಾಯಗೊಂಡ ಕಾರಣ ಆಸ್ಟ್ರೇಲಿಯಾ ತಂಡದಲ್ಲಿ ಈಗಾಗಲೇ ಸಾಕಷ್ಟು ಬದಲಿ ಆಟಗಾರರು ಇದ್ದಾರೆ. ಇದೀಗ ಆರಂಭಿಕ ಆಟಗಾರ ಮ್ಯಾಥ್ಯೂ ಶಾರ್ಟ್ ಕ್ವಾಡ್ ಗಾಯದಿಂದಾಗಿ ಸರಣಿಯಿಂದ ಹೊರಗುಳಿದಿದ್ದಾರೆ. . ಅಫ್ಘಾನಿಸ್ತಾನ ವಿರುದ್ಧದ ಪಂದ್ಯದ ವೇಳೆ ಶಾರ್ಟ್ ಕ್ವಾಡ್ ಗಾಯಕ್ಕೆ ತುತ್ತಾಗಿದ್ದರು.
ಎರಡು ಬಾರಿ ಚಾಂಪಿಯನ್ಸ್ ಟ್ರೋಫಿ ವಿಜೇತರು ಆರಂಭಿಕ ಬ್ಯಾಟರ್ ಜತೆಗೆ ಸ್ಪಿನ್ ಆಯ್ಕೆಯನ್ನು ಸಹ ಕಳೆದುಕೊಂಡಿದೆ. ಇದು ದುಬೈನ ನಿಧಾನಗತಿಯ ವಿಕೆಟ್ನಲ್ಲಿ ಭಾರತ ವಿರುದ್ಧ ಆಡುವಾಗ ಸಮಸ್ಯೆ ಎದುರಿಸಲಿದೆ. ಈ ಕೊರತೆ ನೀಗಿಸಲು ಆಸ್ಟ್ರೇಲಿಯಾವು ಶಾರ್ಟ್ ಅವರ ಬದಲಿಯಾಗಿ ಆಲ್ರೌಂಡರ್ ಕೂಪರ್ ಕೊನೊಲ್ಲಿ ಅವರನ್ನು ತಂಡಕ್ಕೆ ಸೇರಿಸಿದೆ. . ಕೊನೊಲ್ಲಿ ಬಿಗ್ ಬ್ಯಾಷ್ ಲೀಗ್ನಲ್ಲಿ ಪರ್ತ್ ಸ್ಕಾರ್ಚರ್ಸ್ನ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದರು. ಅವರು ತಂಡದ ಮೀಸಲು ಆಟಗಾರರಾಗಿದ್ದರು.
21 ವರ್ಷದ ಮಧ್ಯಮ ಕ್ರಮಾಂಕದ ಬ್ಯಾಟರ್ ಮತ್ತು ಎಡಗೈ ಸ್ಪಿನ್ನರ್ ಈವರೆಗೆ ರಾಷ್ಟ್ರೀಯ ತಂಡದ ಪರ ಕೇವಲ ಮೂರು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆದಾಗ್ಯೂ, ಈ ಪರಿಸ್ಥಿತಿಯು ತಂಡದ ಸಂಯೋಜನೆ ಮತ್ತು ಟ್ರಾವಿಸ್ ಹೆಡ್ಗೆ ಹೊಸ ಆರಂಭಿಕ ಪಾಲುದಾರನಾಗುವ ಸಾಧ್ಯತೆಗಳಿವೆ., ಆಸೀಸ್ ಆರಂಭಿಕ ಸ್ಥಾನಕ್ಕೆ ಜೇಕ್ ಫ್ರೇಸರ್-ಮೆಕ್ಗುರ್ಕ್ ಅವರನ್ನು ಆಯ್ಕೆ ಮಾಡಬಹುದು. ಅದೇ ರೀತಿ ಆಡಮ್ ಜಂಪಾ ಅವರೊಂದಿಗೆ ತಮ್ಮ ಸ್ಪಿನ್ ದಾಳಿಯನ್ನು ಸಮತೋಲನಗೊಳಿಸಲು ತನ್ವೀರ್ ಸಂಘಾ ಅವರನ್ನೂ ತಂಡಕ್ಕೆ ಕರೆಸಬಹುದು ಇದಲ್ಲದೆ, ಗ್ಲೆನ್ ಮ್ಯಾಕ್ಸ್ವೆಲ್ ಈಗಾಗಲೇ ಮಧ್ಯಮ ಕ್ರಮಾಂಕದಲ್ಲಿ ಒಂದು ಆಯ್ಕೆಯಾಗಿದ್ದಾರೆ.
ಕಳೆದ ಐಸಿಸಿ ನಾಕೌಟ್ ಪಂದ್ಯದಲ್ಲಿ ಭಾರತವನ್ನು ಸೋಲಿಸಿದ ಆಸ್ಟ್ರೇಲಿಯಾ
ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ತಂಡದ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ, ಇಂಗ್ಲೆಂಡ್ ವಿರುದ್ಧದ ಗೆಲುವಿನ ನಂತರದ ಮುಂದಿನ ಎರಡು ಪಂದ್ಯಗಳು ಮಳೆಯಿಂದ ಕೊಚ್ಚಿ ಹೋಗಿದ್ದವು. ಆಸೀಸ್ ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಅತ್ಯುತ್ತಮ ದಾಖಲೆಗಳನ್ನು ಹೊಂದಿದೆ. ಭಾರತದ ವಿರುದ್ಧ ಆಡಿದ ಕೊನೆಯ ಮೂರು ನಾಕೌಟ್ ಪಂದ್ಯಗಳನ್ನು ಗೆದ್ದಿದೆ.
ಉಭಯ ತಂಡಗಳು ಕೊನೆಯ ಬಾರಿಗೆ ಏಕದಿನ ವಿಶ್ವಕಪ್ 2023 ರ ಫೈನಲ್ನಲ್ಲಿ ಮುಖಾಮುಖಿಯಾಗಿದ್ದವು, ಅಲ್ಲಿ ಆಸ್ಟ್ರೇಲಿಯಾವು ಟ್ರೋಫಿ ಗೆದ್ದಿತ್ತು. ಸೆಮಿಫೈನಲ್ನಲ್ಲಿ ಸ್ಟೀವ್ ಸ್ಮಿತ್ ನೇತೃತ್ವದ ತಂಡವು ಫೈನಲ್ ಸ್ಥಾನ ಖಾತರಿ ಮಾಡಿಕೊಳ್ಳುವ ಎಲ್ಲ ಸಾಧ್ಯತೆಗಳಿವೆ.