ವಿಜಯನಗರ: ಹಂಪಿ ಉತ್ಸವದ ಹಿನ್ನೆಲೆಯಲ್ಲಿ ಹಂಪಿ ಬಿವೈ ಸ್ಕೈಗೆ ಶಾಸಕ ಎಚ್.ಆರ್. ಗವಿಯಪ್ಪ ಹಾಗೂ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಚಾಲನೆ ನೀಡಿದ್ದಾರೆ.
ಚಿಪ್ಸನ್ ಏವಿಯೇಷನ್ ಹಾಗೂ ತುಂಬಿ ಏವಿಯೇಷನ್ ಕಂಪನಿಯ ಎರಡು ಹೆಲಿಕಾಪ್ಟರ್ ಗಳಲ್ಲಿ ಪ್ರವಾಸಿಗರು ಸಂಚಾರ ಮಾಡುವುದರ ಮೂಲಕ ಹಂಪಿಯನ್ನು ಕಣ್ತುಂಬಿಕೊಳ್ಳಬಹುದು.
ಈ ಮೂಲಕ ಆಗಸದಿಂದ ಹಂಪಿ ವೀಕ್ಷಣೆಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಪ್ರವಾಸಿಗರಿಗೆ ಹಾಗೂ ಸ್ಥಳಿಯರಿಗೆ ಹೆಲಿಕಾಪ್ಟರ್ ಮೂಲಕ ಹಂಪಿ ವೀಕ್ಷಣೆಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಆಗಸದಿಂದ ಪ್ರವಾಸಿಗರು ಹಂಪಿಯ ಸ್ಮಾರಕಗಳನ್ನು ವೀಕ್ಷಣೆ ಮಾಡಬಹುತು. ಈ ಪ್ರವಾಸಕ್ಕೆ ತಲಾ ಒಬ್ಬರಿಗೆ 3.900 ರೂ. ನಿಗದಿ ಮಾಡಲಾಗಿದೆ.
ಒಟ್ಟು ಆರು ದಿನಗಳ ಕಾಲ ಕಮಲಾಪುರದ ಹೋಟೆಲ್ ಮಯೂರ ವಿಹಾರದ ಬಳಿ ಈ ವ್ಯವಸ್ಥೆ ಇರಲಿದ್ದು, ಪ್ರವಾಸಿಗರು ಆಗಸದಲ್ಲಿ ಹಾರುವ ಕನಸು ನನಸು ಮಾಡಿಕೊಳ್ಳಬಹುದು.