ಬೆಂಗಳೂರು: ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೆಂಗಳೂರು ಮಂದಿ ಸುಸ್ತಾಗುತ್ತಿದ್ದಾರೆ. ಇನ್ನೂ ಬೇಸಿಗೆ ಆರಂಭವಾಗಿಲ್ಲ. ಆದರೆ, ಈ ವೇಳೆಯೇ ಸಿಲಿಕಾನ್ ಸಿಟಿಯಲ್ಲಿ 34 ಡಿಗ್ಗಿಗೂ ಅಧಿಕ ಗರಿಷ್ಟ ಉಷ್ಣಾಂಶ ದಾಖಲಾಗುತ್ತಿದೆ. ಇದರಿಂದಾಗಿ ಸಿಲಿಕಾನ್ ಸಿಟಿ ಮಂದಿ ಬೆಚ್ಚಿ ಬಿದ್ದಿದ್ದಾರೆ.
ಬಿಸಿಲಿಗೆ ಬೆಂದವರು ಅನಾರೋಗ್ಯಕ್ಕೆ ಈಡಾಗುತ್ತಿದ್ದು, ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಬಿಸಿಲು ಹೆಚ್ಚಾದಂತೆ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಬೇಸಿಗೆ ಬಿಸಿಲಿಗೆ ನಗರದ ಜನರ ಅರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಬಿಸಿಲಿನಿಂದಾಗಿ ದಿನದಿಂದ ದಿನಕ್ಕೆ ಜ್ವರ, ಕೆಮ್ಮು, ನೆಗಡಿಯಂತಹ ಸಮಸ್ಯೆ ಹೆಚ್ಚಾಗುತ್ತಿವೆ. ಮಕ್ಕಳ ಆರೋಗ್ಯದಲ್ಲಿ ಕೂಡ ಏರುಪೇರು ಕಂಡು ಬರುತ್ತಿದೆ. ಬಿಸಿಲಿನಿಂದ ಡಿ ಹೈಡ್ರೇಶನ್ ಸಮಸ್ಯೆ ಹೆಚ್ಚಾಗುತ್ತಿದೆ.
ಬಿಸಿಲಿಗೆ ಯಾವುದೇ ಭಯ ಬೇಡ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಆದರೆ, ಮುನ್ನೆಚ್ಚರಿಕಾ ಕ್ರಮ ಪಾಲಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಕರೆದ ಪದಾರ್ಥ, ಮಸಾಲೆ ಹಾಗೂ ಜಂಗ್ ಫುಡ್ ಅವೈಡ್ ಮಾಡುಲೇಬೇಕು. ಹೆಚ್ಚು ಪಾನೀಯ, ಹಣ್ಣಿನ ಜೊತೆಗೆ ಹೆಚ್ಚು ನೀರು ಸೇವನೆ ಮಾಡಬೇಕು. ಮಕ್ಕಳನ್ನು ಬಿಸಿಲಿನಲ್ಲಿ ಓಡಾಡಲು ಬಿಡಬೇಡಿ. ಮಧ್ಯಾಹ್ನ ಸಮಯ ಮಕ್ಕಳಿಗೆ ಬಿಸಿಲಿನಿಂದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಮಕ್ಕಳಿಗೆ ಕೊಡೆ ಹಾಗೂ ಫುಲ್ ಡ್ರೆಸ್ ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಆರೋಗ್ಯದಲ್ಲಿ ಏರು ಪೇರು ಕಂಡು ಬಂದಲ್ಲಿ ಸ್ಥಳೀಯ ಆಸ್ಪತ್ರೆ ಮೊರೆ ಹೋಗುವುದು ಉತ್ತಮ ಎಂದು ವೈದ್ಯ ಡಾ. ಅಂಜನಪ್ಪ ಹೇಳಿದ್ದಾರೆ.