ಕಲಬುರಗಿ: ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೆ ಮಷಾಕ್ ದರ್ಗಾದ ಆವರಣದಲ್ಲಿನ ರಾಘವ ಚೈತನ್ಯ ಶಿವಲಿಂಗ ಪೂಜೆಗೆ ಅವಕಾಶ ಸಿಕ್ಕ ಹಿನ್ನೆಲೆಯಲ್ಲಿ 144 ಘೋಷಿಸಲಾಗಿದ್ದು, ವ್ಯಾಪಕ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಇಲ್ಲಿನ ಲಾಡ್ಲೆ ಮಷಾಕ್ ದರ್ಗಾದ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ಸಿಕ್ಕಿದೆ. ಹೀಗಾಗಿ ಪೂಜೆ ಸಲ್ಲಿಸಲು ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಆಳಂದ ಪಟ್ಟಣದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಮಧ್ಯಾಹ್ನ 2 ರಿಂದ ಸಂಜೆ 6 ಗಂಟೆಯವರೆಗೆ ಶಿವಲಿಂಗ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ. ಪೂಜೆಗೆ ಯಾರು ಯಾರು ಹೋಗಲಿದ್ದಾರೆ ಎಂಬ ಪಟ್ಟಿಯನ್ನು ಪೂಜಾರಿ ಸಿದ್ರಾಮಯ್ಯ ಹಿರೇಮಠ ಸಿದ್ಧಪಡಿಸಲಿದ್ದಾರೆ. ಪೂಜೆಗೆ 15 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಸಿದ್ರಾಮಯ್ಯ ಹಿರೇಮಠ ಪೂಜೆಗೆ ಹೋಗುವವರ ಆಧಾರ್ ಕಾರ್ಡ್ ಗಳನ್ನು ಪೊಲೀಸರಿಗೆ ನೀಡಲಿದ್ದಾರೆ. ಆದರೆ, ಈ ಬಾರಿ ವಕ್ಫ್ ಟ್ರಿಬ್ಯೂನಲ್ ಆದೇಶದ ಹಿನ್ನೆಲೆಯಲ್ಲಿ ಸಿದ್ಧಲಿಂಗ ಸ್ವಾಮೀಜಿಗೆ ಪೂಜೆಗೆ ಅವಕಾಶ ನೀಡಿಲ್ಲ. ಹೀಗಾಗಿ ಅವರು ಈ ಬಾರಿ ಪೂಜೆಯಿಂದ ಹೊರಗೆ ಉಳಿದಿದ್ದಾರೆ.