ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ ಸಿ)ಯು (UPSC CMS Recruitment 2025) ಕಂಬೈನ್ಡ್ ಮೆಡಿಕಲ್ ಸರ್ವಿಸಸ್ ಎಕ್ಸಾಂ (ಸಿಎಂಎಸ್) ಮೂಲಕ 705 ವೈದ್ಯಕೀಯ ಸೇವೆಗಳ ಹುದ್ದೆಗಳ ನೇಮಕಕ್ಕೆ ನೋಟಿಫಿಕೇಶನ್ ಹೊರಡಿಸಲಾಗಿದೆ. ವೈದ್ಯಕೀಯ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ಈಗಾಗಲೇ ಆನ್ ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಮಾರ್ಚ್ 11ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. https://upsconline.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 32 ಆಗಿದೆ. ಎಸ್ಸಿ, ಎಸ್ಟಿಯವರಿಗೆ ಐದು ವರ್ಷ, ಒಬಿಸಿಯವರಿಗೆ ಮೂರು ವರ್ಷ ವಯಸ್ಸಿನ ಸಡಿಲಿಕೆ ಇದೆ.
ಯಾವ ಹುದ್ದೆಗಳು ಖಾಲಿ?
ಸೆಂಟ್ರಲ್ ಹೆಲ್ತ್ ಸರ್ವೀಸ್ 226
ಮೆಡಿಕಲ್ ಆಫೀಸರ್ ಗ್ರೇಡ್ ಇನ್ ಜೆನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಸಬ್ ಕೇಡರ್ ಆಫ್
ಅಸಿಸ್ಟಂಟ್ ಡಿವಿಷನಲ್ ಮೆಡಿಕಲ್ ಆಫೀಸರ್ ಇನ್ ರೈಲ್ವೆ 450
ಜೆನೆರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಇನ್ ದೆಹಲಿ ಮುನಿಸಿಪಲ್ ಕೌನ್ಸಿಲ್ 9
ಜೆನೆರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಗ್ರೇಡ್ -2 20
ವೇತನ ಎಷ್ಟು?
ಜೆನೆರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಸಬ್ ಕೇಡರ್ ಆಫ್ ಸೆಂಟ್ರಲ್ ಹೆಲ್ತ್ ಸರ್ವೀಸ್ ಹುದ್ದೆಗಳಿಗೆ 56,100-1,77,500 ರೂಪಾಯಿ ಸಂಬಳ ಇರಲಿದೆ. ಅಸಿಸ್ಟಂಟ್ ಡಿವಿಷನ್ ಮೆಡಿಕಲ್ ಆಫೀಸರ್ ಎಡಿಎಂಒ ಇನ್ ರೈಲ್ವೆ ಹುದ್ದೆಗಳಿಗೆ 15,600-39,100 ರೂ. ಇರಲಿದೆ. ಜೆನೆರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಜಿಡಿಎಂಒ ಗ್ರೇಡ್ 2 ಇನ್ ಎನ್ ಡಿಎಂಎಸ್ ಹುದ್ದೆಗಳಿಗೆ 15,600-39,100 ರೂ. ಇರಲಿದೆ. ಜೆನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಇನ್ ದೆಹಲಿ ಮುನಿಸಿಪಲ್ ಕೌನ್ಸಿಲ್ ಹುದ್ದೆಗಳಿಗೆ 56,100-177500 ರೂ. ಸಂಬಳ ಇರಲಿದೆ.