ಬೆಂಗಳೂರು: ರಾಜ್ಯದಲ್ಲಿ 2024 -25ನೇ ಸಾಲಿನ ಎಸ್ಸೆಸ್ಸೆಲ್ಸಿ (SSLC) ಪರೀಕ್ಷೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಮಧ್ಯೆ ವಿದ್ಯಾರ್ಥಿಗಳ ತೇರ್ಗಡೆಯ ಅಂಕ ಕಡಿತಗೊಳಿಸುವಂತೆ ಮನವಿ ಮಾಡಲಾಗಿದೆ.
ವಿದ್ಯಾರ್ಥಿಗಳ ತೇರ್ಗಡೆಗೆ ನಿಗದಿಯಾಗಿರುವ 35 ಅಂಕಗಳನ್ನು ಕಡಿತ ಮಾಡಬೇಕು. ಈ ಅಂಕಗಳನ್ನು 33ಕ್ಕೆ ಇಳಿಸಬೇಕು ಎಂದು ಮನವಿ ಮಾಡಲಾಗುತ್ತಿದೆ. ರಾಜ್ಯ ಪಠ್ಯಕ್ರಮದಲ್ಲಿ ತೇರ್ಗಡೆ ಅಂಕ ಕಡಿಮೆ ಮಾಡಬೇಕು ಎಂದು ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್ ಆಫ್ ಪ್ರೈಮರಿ ಆ್ಯಂಡ್ ಸೆಕೆಂಡರಿ ಸ್ಕೂಲ್ಸ್ ಮನವಿ ಮಾಡಿದೆ.
ಇನ್ನಿತರ ಪಠ್ಯಕ್ರಮದಲ್ಲಿ 33 ಕನಿಷ್ಟ ಅಂಕಗಳಿವೆ. ನಮ್ಮಲ್ಲಿ ಮಾತ್ರ 35 ಕನಿಷ್ಠ ಅಂಕವಿದೆ. ಹೀಗಾಗಿ ಮಕ್ಕಳು ರಾಜ್ಯ ಪಠ್ಯಕ್ರಮ ತೊರೆದು ಇತರೆ ಪಠ್ಯಕ್ರಮದ ಕಡೆಗೆ ವಲಸೆ ಹೋಗುತ್ತಿದ್ದಾರೆ. 2024-25ರ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ 35 ಅಂಕದ ಬದಲು 33 ಅಂಕಗಳನ್ನು ನಿಗದಿ ಮಾಡಬೇಕು. 33 ಅಂಕ ಪಡೆದರೆ ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಾರೆ ಎಂಬ ತಿದ್ದುಪಡಿಯನ್ನು ಕೂಡಲೇ ಹೊರ ತರಬೇಕು. ಈ ಮೂಲಕ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಈ ಕುರಿತು ಸಿಎಂಗೆ ಮನವಿ ಮಾಡಲಾಗಿದೆ.