ಮುಂಬೈ: ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಎಂ ಅಂಬಾನಿ ಅವರ ನೇತೃತ್ವದಲ್ಲಿ ರಿಲಯನ್ಸ್ ಫೌಂಡೇಶನ್ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಮಾಡಿರುವ ಕ್ರೀಡಾಭಿವೃದ್ಧಿಯ ಸಾಧನೆಗಳಿಗಾಗಿ, ಫೆಬ್ರವರಿ 14ರಂದು ಮುಂಬೈನಲ್ಲಿ ನಡೆದ 2025ರ ‘ಸ್ಪೋರ್ಟ್‌ಸ್ಟಾರ್ ಏಸಸ್ ಅವಾರ್ಡ್ಸ್’ ಸಮಾರಂಭದಲ್ಲಿ ಪ್ರತಿಷ್ಠಿತ ‘ಅತ್ಯುತ್ತಮ ಕಾರ್ಪೊರೇಟ್’ (ಕ್ರೀಡಾ ಪ್ರೋತ್ಸಾಹಕ್ಕಾಗಿ) ಪ್ರಶಸ್ತಿಯ ಗೌರವವನ್ನು ಪಡೆದುಕೊಂಡಿದೆ.
ರಿಲಯನ್ಸ್ ಫೌಂಡೇಶನ್ ನಿಂದ ಪ್ರೋತ್ಸಾಹ ಪಡೆಯುತ್ತಿರುವ ಕ್ರೀಡಾಪಟು ಜ್ಯೋತಿ ಯರ್ರಾಜಿ ಟ್ರ್ಯಾಕ್‌ನಲ್ಲಿ ಮಾಡಿರುವ ಅದ್ಭುತ ಸಾಧನೆಗಳನ್ನು ಗುರುತಿಸಿ ವರ್ಷದ ಕ್ರೀಡಾಪಟು (ಟ್ರ್ಯಾಕ್ ಮತ್ತು ಫೀಲ್ಡ್) ಪ್ರಶಸ್ತಿಯನ್ನು ನೀಡಲಾಯಿತು. ಇದು ಕೂಡ ರಿಲಯನ್ಸ್ ಫೌಂಡೇಶನ್ ನ ಕ್ರೀಡಾ ಪ್ರೋತ್ಸಾಹದ ಕೆಲಸಕ್ಕೆ ಸಿಕ್ಕ ಮನ್ನಣೆಯಂತಿದೆ.
ರಿಲಯನ್ಸ್ ಫೌಂಡೇಶನ್ ತನ್ನ ವಿವಿಧ ಕ್ರೀಡಾ ಯೋಜನೆಗಳ ಮೂಲಕ ದೇಶದ ಕ್ರೀಡಾ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತ ಬಂದಿದೆ. ಕಳೆದ ವರ್ಷ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತದ ಮೊದಲ ‘ಕಂಟ್ರಿ ಹೌಸ್’ ಆದ ‘ಇಂಡಿಯಾ ಹೌಸ್’ನಂತಹ ಉಪಕ್ರಮದೊಂದಿಗೆ ರಿಲಯನ್ಸ್ ಪ್ರತಿಷ್ಠಾನವು ಭಾರತದ ಕ್ರೀಡಾ ಅಭಿಯಾನದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದೆ.
ರಿಲಯನ್ಸ್ ಫೌಂಡೇಶನ್ ಪ್ರಸ್ತುತ 10ಕ್ಕೂ ಹೆಚ್ಚು ಒಲಿಂಪಿಕ್ ಕ್ರೀಡೆಗಳಲ್ಲಿ 100ಕ್ಕೂ ಹೆಚ್ಚು ಕ್ರೀಡಾಪಟುಗಳನ್ನು ಬೆಂಬಲಿಸುತ್ತಿದೆ. ಜೊತೆಗೆ ತಳಮಟ್ಟದ ಫುಟ್‌ಬಾಲ್ ಮತ್ತು ಒಲಿಂಪಿಕ್ ಕ್ರೀಡಾ ಅಭಿವೃದ್ಧಿಯಲ್ಲಿ ತನ್ನ ಕೆಲಸಗಳನ್ನು ನಿರ್ವಹಿಸುತ್ತಿದೆ.
ಭಾರತದಲ್ಲಿ ಕ್ರೀಡೆಗಳ ಅಭಿವೃದ್ಧಿ ಮತ್ತು ಫುಟ್‌ಬಾಲ್ ಬೆಳವಣಿಗೆಗಾಗಿ ರಿಲಯನ್ಸ್ ಫೌಂಡೇಶನ್‌ನ ಉಪಕ್ರಮಗಳು ತಳಮಟ್ಟದಿಂದ ಗಣ್ಯ ಹಂತದವರೆಗೆ ಸುಮಾರು 23 ದಶಲಕ್ಷ ಜನರನ್ನು ಮುಟ್ಟಿವೆ.
ಸ್ಪೋರ್ಟ್‌ಸ್ಟಾರ್ ಏಸಸ್ ಅವಾರ್ಡ್ಸ್’ ಭಾರತೀಯ ಕ್ರೀಡಾ ಸಾಧಕರನ್ನು ಗೌರವಿಸುವ ಪ್ರಶಸ್ತಿಯಾಗಿ ವಿಶೇಷ ಮಹತ್ವವನ್ನು ಹೊಂದಿದೆ. ದೇಶದ ಭವಿಷ್ಯದ ಕ್ರೀಡಾತ್ತಾರೆಯರನ್ನು ಗುರುತಿಸುವ ಮತ್ತು ಬಲಿಷ್ಠವಾಗಿ ರೂಪಿಸುವ ನಿಟ್ಟಿನಲ್ಲಿ ರಿಲಯನ್ಸ್ ಫೌಂಡೇಶನ್ ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ಈ ಬಾರಿ ತನ್ನ ಗೌರವವನ್ನು ಸಲ್ಲಿಸಿದೆ.