ದುಬೈ: ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಅವಕಾಶ ಪಡೆಯಲಿಲ್ಲ. ಹೀಗಾಗಿ ಅವರು ಫ್ರೀಯಾಗಿ ಓಡಾಡುತ್ತಿದ್ದಾರೆ. ಅಂತೆಯೇ ಅವರು ಗಾಯಕಿ ಆಶಾ ಭೋಸ್ಲೆ ಅವರ ಮೊಮ್ಮಗಳು ಜನೈ ಜತೆ ಝನಾಯ್ ಅವರ ಹೊಸ ಮ್ಯೂಸಿಕ್ ಆಲ್ಬಮ್‌ನ ‘ಕೆಹೆಂದಿ ಹೈ’ ಹಾಡಿನ ಕೆಲವು ಸಾಲುಗಳನ್ನು ಹಾಡುತ್ತಿರುವ ವಿಡಿಯೊ ವೈರಲ್(Goes Viral) ಆಗಿದೆ.
ಇತ್ತೀಚೆಗೆ ಜನೈ ಭೋಸ್ಲೆ ತಮ್ಮ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಈ ವೇಳೆಯೂ ಸಿರಾಜ್ ಕಾಣಿಸಿಕಿಕೊಂಡಿದ್ದರು. ಈ ವೇಳೆ ಸಿರಾಜ್ ಅವರು ಜನೈ ಭೋಸ್ಲೆ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಭಾರೀ ಸುದ್ದಿಯಾಗಿತ್ತು. ಈ ಸುದ್ದಿ ಎಲ್ಲಡೆ ವೈರಲ್ ಆಗುತ್ತಿದ್ದಂತೆ ಸಿರಾಜ್ ಹಾಗೂ ಜನೈ ಇಬ್ಬರು ಗಾಸಿಪ್ಗಳಿಗೆ ಬ್ರೇಕ್ ಹಾಕಿದ್ದರು. ನಾವಿಬ್ಬರು ಅಣ್ಣ-ತಂಗಿ ಇದ್ದಂತೆ ಎಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಾಕಿ ವದಂತಿಗಳಿಗೆ ತೆರೆ ಎಳೆದಿದ್ದರು. ಇದೀಗ ಮತ್ತೆ ಜತೆಯಾಗಿ ಕಾಣಿಸಿಕೊಂಡಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಸಿರಾಜ್ ಮಕ್ಕಾ ಮದಿನಾ ದರ್ಶನಕ್ಕೆ ತೆರಳಿದ್ದರು. ಅಲ್ಲಿಂದ ವಾಪಸ್ ಬಂದಿರುವ ಅವರು ಹಾಡಿನ ತುಣುಕನ್ನು ಗುನುಗಿದ್ದಾರೆ. ಮೊಹಮ್ಮದ್ ಸಿರಾಜ್, ಪಂಜಾಬಿ ನಟಿ ಮಾಹಿರಾ ಶರ್ಮಾ(Mahira Sharma) ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಮಾಹಿರಾ ಶರ್ಮಾ ಅವರ ಎಲ್ಲ ಪೋಸ್ಟ್‌ಗಳಿಗೆ ಸಿರಾಜ್ ಲೈಕ್ಸ್ ಮಾಡುತ್ತಿದ್ದಾರೆ ಎಂಬುದೇ ಈ ವಾದಕ್ಕೆ ಕಾರಣ,
ಮಹಿರಾ ಶರ್ಮಾ ಬಿಗ್ ಬಾಸ್ 13 ರ ಸ್ಪರ್ಧಿಯಾಗಿದ್ದರು. ಸದ್ಯ ಅವರು ಪಂಜಾಬಿ ಚಿತ್ರಗಳಲ್ಲಿ ಮತ್ತು ಮ್ಯೂಸಿಕ್ ವೀಡಿಯೊಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ವರ್ಷ ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿ ಸಿರಾಜ್ ಅವರನ್ನು 12.75 ಕೋಟಿ ರೂ.ಗಳಿಗೆ ಗುಜರಾತ್ ಟೈಟಾನ್ಸ್ ತಂಡ ಸೇರಿದ್ದರು.