ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಆರಂಭವಾಗಲು ಕೆಲವೇ ದಿನಗಳು ಬಾಕಿಯಿರುವುದರಿಂದ, ಕ್ರಿಕೆಟ್ ಅಭಿಮಾನಿಗಳು, ವಿಶ್ಲೇಷಕರು ಮತ್ತು ಹಳೆಯ ಕ್ರಿಕೆಟಿಗರು ತಮ್ಮ ತಮ್ಮ ಆಯ್ಕೆಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದ್ದಾರೆ. ಎಂಟು ತಂಡಗಳ ಟೂರ್ನಮೆಂಟ್ ಪಾಕಿಸ್ತಾನ ಮತ್ತು ಯುಎಇಯಲ್ಲಿ ಫೆಬ್ರವರಿ 19ರಿಂದ ಮಾರ್ಚ್ 9ರವರೆಗೆ ನಡೆಯಲಿದೆ.
ಮಾಜಿ ಆಸ್ಟ್ರೇಲಿಯಾ ನಾಯಕ ಮೈಕಲ್ ಕ್ಲಾರ್ಕ್ ಕೂಡ ತನ್ನ ನಿರೀಕ್ಷೆಗ ಪಟ್ಟಿ ನೀಡಿದ್ದು, ಯಾವ ತಂಡ ಈ ಪ್ರಶಸ್ತಿಯನ್ನು ಗೆಲ್ಲಬಹುದು ಎಂಬುದನ್ನು ತಿಳಿಸಿದ್ದಾರೆ. ಜೊತೆಗೆ, ಟೂರ್ನಮೆಂಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರು ಮತ್ತು ಟಾಪ್ ವಿಕೆಟ್‌ಟೇಕರ್ ಯಾರು ಎನ್ನುವುದನ್ನು ಕೂಡ ಊಹಿಸಿದ್ದಾರೆ.
ಕ್ಲಾರ್ಕ್ ಅವರು, ಭಾರತವು ಚಾಂಪಿಯನ್ಸ್ ಟ್ರೋಫಿ ಗೆಲ್ಲಬಹುದು ಮತ್ತು ಅವರ ನಾಯಕ ರೋಹಿತ್ ಶರ್ಮಾ ಅತ್ಯುತ್ತಮ ರನ್‌ಸ್ಕೋರರ್ ಆಗಬಹುದು ಎಂದು ಹೇಳಿದ್ದಾರೆ.
“ಭಾರತವು ಚಾಂಪಿಯನ್ಸ್ ಟ್ರೋಫಿ ಗೆಲ್ಲಲಿದೆ. ಅವರ ನಾಯಕ ಈಗ ಉತ್ತಮ ಫಾರ್ಮ್‌ನಲ್ಲಿ ಹಿಂತಿರುಗಿದ್ದಾರೆ. ನಾನು ರೋಹಿತ್ ಶರ್ಮಾ ಟೂರ್ನಮೆಂಟ್‌ನ ಟಾಪ್ ರನ್ ಗಳಿಕೆದಾರ ಎಂದು ನಂಬುತ್ತೇನೆ,ಎಂದು ಭಾವಿಸುತ್ತೇನೆ,” ಎಂದು ಕ್ಲಾರ್ಕ್ ಕ್ರಿಕೆಟ್ ಪಾಡ್‌ಕಾಸ್ಟ್‌ನ ಎಪಿಸೋಡ್ನಲ್ಲಿ ಹೇಳಿದ್ದಾರೆ.
“ಅವರು ಮತ್ತೆ ರನ್ ಮಾಡುತ್ತಿರುವುದು ನೋಡಲು ಖುಷಿಯಾಗುತ್ತಿದೆ. ಭಾರತಕ್ಕೆ ಖಂಡಿತವಾಗಿಯೂ ಅವರ ಅಗತ್ಯವಿದೆ,” ಎಂದು ಅವರು ಹೇಳಿದ್ದಾರೆ.
ಜೋಫ್ರಾ ಉತ್ತಮ ಬೌಲರ್
ಕ್ಲಾರ್ಕ್, ಇಂಗ್ಲೆಂಡ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಷ್ಟಾಗಿ ಮೆಚ್ಚುವಂತಹ ಪ್ರದರ್ಶನ ನೀಡದೆ ಇರಬಹುದು. ಆದರೆ ಜೋಫ್ರಾ ಆರ್ಚರ್ ಈ ಟೂರ್ನಮೆಂಟ್‌ನ ಟಾಪ್ ವಿಕೆಟ್‌ಟೇಕರ್ ಆಗಬಹುದು ಎಂದು ಭಾವಿಸಿದ್ದಾರೆ.
“ನಾನು ಜೋಫ್ರಾ ಆರ್ಚರ್ ಅವರೇ ಟಾಪ್ ವಿಕೆಟ್‌ಟೇಕರ್ ಎಂದು ಹೇಳಲು ಬಯಸುತ್ತೇನೆ. ನಾನು ಇಂಗ್ಲೆಂಡ್ ಅನ್ನು ಅಷ್ಟಾಗಿ ಬಲಿಷ್ಠ ತಂಡವೆಂದು ಹೇಳುತ್ತಿಲ್ಲ. ಆದರೆ ಜೋಫ್ರಾ ಬೌಲಿಂಗ್ಗೆ ಆಡಲು ತುಂಬಾ ಕಷ್ಟವಾಗಲಿದೆ. ಆದ್ದರಿಂದ, ನನ್ನ ಟಾಪ್ ವಿಕೆಟ್‌ಟೇಕರ್ ಆಗಿ ಅವನನ್ನು ಆಯ್ಕೆ ಮಾಡುತ್ತಿದ್ದೇನೆ,” ಎಂದು ಕ್ಲಾರ್ಕ್ ಹೇಳಿದರು.
ಆಸ್ಟ್ರೇಲಿಯಾದ ಓಪನರ್ ಟ್ರಾವಿಸ್ ಹೆಡ್ ಅವರನ್ನು ಟೂರ್ನಮೆಂಟ್‌ನ ಅತ್ಯುತ್ತಮ ಆಟಗಾರನಾಗಿ ಕ್ಲಾರ್ಕ್ ಆಯ್ಕೆ ಮಾಡಿದರೂ, ಅವರು ಆಸ್ಟ್ರೇಲಿಯಾ ಪ್ರಶಸ್ತಿ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ.
“ನಾನು ಟ್ರಾವಿಸ್ ಹೆಡ್ ಅನ್ನು (ಪ್ಲೇಯರ್ ಆಫ್ ದ ಟೂರ್ನಮೆಂಟ್) ಎಂದು ಆಯ್ಕೆ ಮಾಡುತ್ತಿದ್ದೇನೆ. ಅವರು ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಐಪಿಎಲ್‌ನಲ್ಲಿ ಅವನ ಪ್ರದರ್ಶನ ಅದ್ಭುತವಾಗಿತ್ತು. ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲೂ ಪ್ರದರ್ಶನ ಅದ್ಭುತವಾಗಿತ್ತು. ಶ್ರೀಲಂಕಾ ಸರಣಿಯಲ್ಲಿ ಬ್ರೇಕ್ ಪಡೆದುಕೊಂಡಿದ್ದು ಆಡಲು ಸಂಪೂರ್ಣ ಸಿದ್ಧರಾಗಿದ್ದಾರೆ. ಆದ್ದರಿಂದ, ನಾನು ಟ್ರಾವಿಸ್ ಹೆಡ್ ಟೂರ್ನಮೆಂಟ್‌ನ ಶ್ರೇಷ್ಠ ಆಟಗಾರನಾಗಬಹುದು ಎಂದು ಭಾವಿಸುತ್ತೇನೆ,” ಎಂದು ಅವರು ಅಭಿಪ್ರಾಯಪಟ್ಟರು.