ಭಾರತೀಯ ರಾಷ್ಟ್ರೀಯ ಹಾಕಿ ತಂಡ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿತ್ತು. ಅದೇ ಸಮಯದಲ್ಲಿ ಎಂಜಿ ಇಂಡಿಯಾ ಭಾರತದಲ್ಲಿ ತನ್ನ ವಿಂಡ್ಸರ್ ಇವಿ ಬಿಡುಗಡೆ ಮಾಡಿತ್ತು. ತಕ್ಷಣವೇ ತಯಾರಕರು ಈ ಎಲೆಕ್ಟ್ರಿಕ್ ಕಾರನ್ನು ಒಲಿಂಪಿಯನ್‌ಗಳಿಗೆ ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದರು. ಪಿ.ಆರ್. ಶ್ರೀಜೇಶ್ ಭಾರತೀಯ ಹಾಕಿ ತಂಡದ ಗೋಲ್‌ಕೀಪರ್. ಈಗ ಅವರು ಈ ಇವಿಯನ್ನು ಸ್ವೀಕರಿಸಿದ್ದಾರೆ.
ಒಲಿಂಪಿಯನ್ ಶ್ರೀಜೇಶ್ ಕೊಚ್ಚಿಯ ಎಂಜಿ ಕೋಸ್ಟ್ಲೈನ್ ಗ್ಯಾರೇಜಸ್ ( MG Coastline Garages) ಡೀಲರ್‌ನಿಂದ ಕಾರನ್ನು ಸ್ವೀಕರಿಸಿದರು. ಈ ವಾಹನವು ಬಿಳಿ ವರ್ಣದ ಟಾಪ್-ಸ್ಪೆಕ್ ವೇರಿಯಂಟ್ ಆಗಿದೆ. 2024ರ ನವೆಂಬರ್‌ನಲ್ಲಿ ಎಂಜಿ ಮೋಟಾರ್ ಇಂಡಿಯಾ ಚಂಡೀಗಢದಲ್ಲಿ ಆಯೋಜಿಸಿದ್ದ ಅದ್ಧೂರಿ ಸಮಾರಂಭದಲ್ಲಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಎಲ್ಲಾ ಕ್ರೀಡಾಪಟುಗಳಿಗೆ ಹೊಸ ಇವಿ ನೀಡಿತ್ತು. ಈ ಸಂದರ್ಭದಲ್ಲಿ 25 EV ಗಳನ್ನು ಅಧಿಕೃತವಾಗಿ ವಿತರಿಸಲಾಗಿತ್ತು.
ಶ್ರೀಜೇಶ್ ಕೇರಳದವರಾಗಿರುವ ಕಾರಣ ಚಂಡೀಗಢದಿಂದ ಕಾರನ್ನು ಕೆರಳಕ್ಕೆ ಸಾಗಿಸುವುದು ಕಷ್ಟ ಎಂಬ ಕಾರಣಕ್ಕೆ ಕೊಚ್ಚಿ ಡೀಲರ್‌ನಿಂದ ಸ್ವೀಕರಿಸಿದ್ದಾರೆ. ಫೆಬ್ರವರಿ 13, 2025ರಂದು . ಶ್ರೀಜೇಶ್ ತಮ್ಮ ಕುಟುಂಬದೊಂದಿಗೆ ಕಾರನ್ನು ಸ್ವೀಕರಿಸಿದ್ದಾರೆ.
ಎಂಜಿ ವಿಂಡ್ಸರ್ ಇವಿ ಬಗ್ಗೆ
ಈ ದಿನಗಳಲ್ಲಿ Windsor EV ಯ ಎಕ್ಸ್-ಶೋರೂಮ್ ಬೆಲೆ 12-14 ಲಕ್ಷ ರೂಪಾಯಿಯಿದೆ. ಈ ಕಾರು ಮೂರು ವೇರಿಯಂಟ್‌ಗಳಲ್ಲಿ ಲಭ್ಯವಿದೆ – Excite, Exclusive, Essence. ಈ ವಾಹನವನ್ನು ಸಂಪೂರ್ಣ ಮೊತ್ತ ಪಾವತಿಸಿ ಅಥವಾ Battery as a Service (BaaS) ಯೋಜನೆಯ ಮೂಲಕ ತೆಗೆದುಕೊಳ್ಳಬಹುದು. ಇದರ ವಿನ್ಯಾಸ ಅತೀ ವಿಭಿನ್ನವಾಗಿದೆ ಹಾಗೂ ಒಳಗೆ ವಿಶಾಲವಾದ ಆಸನ ವ್ಯವಸ್ಥೆ ನೀಡಲಾಗಿದೆ. ಇದು ಸ್ಪ್ಲಿಟ್ ಹೆಡ್‌ಲ್ಯಾಂಪ್‌ಗಳು, ಸೊಗಸಾದ LED DRLs, ವಿಶಿಷ್ಟ ಏರ್ ಡ್ಯಾಮ್, 18-ಇಂಚಿನ ಐದು ಸ್ಪೋಕ್ ಅಲಾಯ್ ವೀಲ್‌ಗಳು ಮತ್ತು ಆಕರ್ಷಕ ಟೈಲ್ ಲ್ಯಾಂಪ್‌ಗಳನ್ನು ಹೊಂದಿದೆ.
ತಯಾರಕರು ಇದನ್ನು Crossover Utility Vehicle ಎಂದು ಕರೆಯುತ್ತಾರೆ. ಇದರ ಗಾತ್ರ 4,295 mm ಉದ್ದ, 1,850 mm ಅಗಲ ಹಾಗೂ 1,677 mm ಎತ್ತರವಾಗಿದೆ. ವೀಲ್‌ಬೆಸ್ 2,700 mm ಉದ್ದವಿದೆ.
ಕ್ಯಾಬಿನ್ ವಿನ್ಯಾಸ ವಿಶೇಷವಾಗಿದೆ. ಇದರಲ್ಲಿ ಆಕರ್ಷಕ ಕಪ್ಪು upholstery ಗೆ ಬ್ರಾಂಜ್ ಎಸನ್ಸ್ ನೀಡಲಾಗಿದೆ. ಪೀಚರ್ಗಳ ಪಟ್ಟಿ ದೊಡ್ಡದಾಗಿದೆ – 15.6-ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಅತ್ಯಂತ ದೊಡ್ಡ ಕೇಂದ್ರ ಟಚ್‌ಸ್ಕ್ರೀನ್ (ಈ ಸೆಗ್ಮೆಂಟ್‌ನ ಅತಿದೊಡ್ಡದು), ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಚಾರ್ಜರ್, 9 ಸ್ಪೀಕರ್‌ಗಳಿರುವ ಇನ್ಫಿನಿಟಿ ಸೌಂಡ್ ಸಿಸ್ಟಂ, ಸ್ವಯಂಚಾಲಿತ ಕ್ಲೈಮೇಟ್ ಕಂಟ್ರೋಲ್ , ಪನೊರಮಿಕ್ ಗ್ಲಾಸ್ ರೂಫ್, 135 ಡಿಗ್ರಿ ವರೆಗೆ Recline ಆಗುವ Aero Lounge ಸೀಟ್ಗಳು ಮತ್ತು ಕ್ರೂಸ್ ಕಂಟ್ರೋಲ್ ಇದೆ. .

ಬ್ಯಾಟರಿ ಬ್ಯಾಕ್ ಅಪ್
Windsor EV ನಲ್ಲಿ 38 kWh ಬ್ಯಾಟರಿ ಪ್ಯಾಕ್ ಹೊಂದಿರುವ ಸಿಂಗಲ್ -ಮೋಟಾರ್ ಸೆಟಪ್ ಹೊಂದಿದೆ. ಮುಂಭಾಗದಲ್ಲಿ ಜೋಡಿಸಲಾದ ಎಲೆಕ್ಟ್ರಿಕ್ ಮೋಟಾರ್ 136 PS ಶಕ್ತಿ ಮತ್ತು 200 Nm ಟಾರ್ಕ್ ಉತ್ಪಾದಿಸಲು ಸಮರ್ಥವಾಗಿದೆ. ಈ ಬ್ಯಾಟರಿ ಪ್ರತಿ ಚಾರ್ಜ್‌ಗೆ 331 ಕಿಮೀ ರೇಂಜ್ ಒದಗಿಸುತ್ತವೆ ಎಂದು ಕಂಪನಿ ಹೇಳಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, TPMS ಮತ್ತು ಪ್ರಗತಿಯಾದ ಚಾಲಕ ಸಹಾಯ ವ್ಯವಸ್ಥೆ (ADAS) ಹೊಂದಿದೆ.
ಪಿ.ಆರ್. ಶ್ರೀಜೇಶ್‌ಗೆ ಟಾಟಾ ಕರ್ವ್ ಸಿಕ್ಕಿತ್ತು
ಒಲಿಂಪಿಕ್ ಪದಕ ವಿಜೇತ ಶ್ರೀಜೇಶ್ Tata Curvv.EV ನೂತನ ಮಾದರಿಯ ಕಾರನ್ನೂ ಉಡುಗೊರೆಯಾಗಿ ಪಡೆದಿದ್ದಾರೆ. ಇದೂ ಕೂಡ ತಯಾರಕರ ಗೌರವದ ಸಂಕೇತವಾಗಿದೆ. ಈ ವಿತರಣೆಯು ಕೊಚ್ಚಿಯಲ್ಲಿರುವ ಹೊಸ ಎಲೆಕ್ಟ್ರಿಕ್ ಕಾರ್ ಸ್ಟೋರ್ ಮೂಲಕ ಪೂರ್ಣಗೊಂಡಿದೆ.
Curvv.EV ನ ಶ್ರೀಜೇಶ್‌ಗೆ ನೀಡಲಾದ ಮಾದರಿ 55 kWh ಟಾಪ್-ಸ್ಪೆಕ್ ವೇರಿಯಂಟ್ ಆಗಿದ್ದು, ‘Virtual Sunrise’ ಬಣ್ಣದಲ್ಲಿ ಲಭ್ಯವಿದೆ. Curvv ಎರಡು ಬ್ಯಾಟರಿ ಆಯ್ಕೆಗಳನ್ನು ಹೊಂದಿದೆ – 45 kWh ಮತ್ತು 55 kWh. ಹಾಕಿ ತಾರೆ ದೊಡ್ಡ ಬ್ಯಾಟರಿ ಆಯ್ಕೆಯನ್ನು ಪಡೆದಿದ್ದಾರೆ. ಈ ಕಾರು ಪ್ರತಿ ಚಾರ್ಜ್‌ಗೆ 585 ಕಿಮೀ ಪ್ರಯಾಣಿಸಲು ಸಾಧ್ಯವಿದೆ ಎಂದು ಕಂಪನಿ ಹೇಳಿದೆ.
ಶ್ರೀಜೇಶ್ ಟೋಕಿಯೋ ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು, ಇದರಿಂದಾಗಿ ತಂಡ ಗೆಲುವು ಸಾಧಿಸಿತು. ಅವರು ಎದುರಾಳಿ ತಂಡದ 62 ಶಾಟ್‌ಗಳಲ್ಲಿ 50 ಶಾಟ್‌ಗಳನ್ನು ತಡೆದು ತಂಡದ ಗೆಲುವಿಗೆ ಕಾರಣರಾದರು.