ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ನಾನೊಬ್ಬನೇ ಚರ್ಚಿಸಲು ಆಗುವುದಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಹಿಂದ ವರ್ಗಕ್ಕೆ ನೀಡುವ ವಿಷಯವನ್ನು ಎಲ್ಲರೂ ಸೇರಿ ಚರ್ಚಿಸಬೇಕಾಗುತ್ತದೆ. ಅದು ಹೈಕಮಾಂಡ್ ಹಂತದಲ್ಲಿ ಚರ್ಚೆಯಾಗುವ ವಿಷಯವಾಗಿದೆ. ಯಾರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂಬುವುದನ್ನು ತಾವೊಬ್ಬರೇ ನಿರ್ಧರಿಸಲು ಆಗಲ್ಲ. ಈ ಕುರಿತು ನಮ್ಮ ಹಂತದಲ್ಲಿ ಯಾವುದೇ ಚರ್ಚೆಯಾಗಿಲ್ಲ. ಈಗಾಗಲೇ ಅಧ್ಯಕ್ಷ ಸ್ಥಾನದ ಕುರಿತು ಎಐಸಿಸಿ ಅಧ್ಯಕ್ಷರು ಹೇಳಿದ್ದಾರೆ. ಮೊದಲು ಸಿಎಂ ಹಾಗೂ ಡಿಸಿಎಂ ಕರೆದು ಮಾತನಾಡುತ್ತಾರೆ. ಆನಂತರ ನಮ್ಮನ್ನು ಕರೆಯಬಹುದು. ಆಗ ನಾವು ಚರ್ಚೆ ಮಾಡುತ್ತೇವೆ ಎಂದಿದ್ದಾರೆ.
ದಲಿತ ಸಮಾವೇಶ ಸದ್ಯಕ್ಕೆ ಯಾವುದೂ ಇಲ್ಲ, ಸಮಾವೇಶ ನಡೆಸಬೇಕಾದರೆ ಪಕ್ಷದ ಅಡಿ ಚರ್ಚಿಸಿ ಎಲ್ಲಿ, ಯಾವಾಗ ಮಾಡಬೇಕೆಂದು ನಿರ್ಧರಿಸಬೇಕಾಗುತ್ತದೆ. ದಲಿತ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಸಚಿವರ ಸಭೆ ಕರೆಯಬೇಕೆಂದೇನೂ ಇಲ್ಲ. ಫೋನ್‌ನಲ್ಲಿ, ಊಟ, ವಿಮಾನದಲ್ಲಿ ಪ್ರಯಾಣಿಸುವಾಗಲೂ ಮಾತನಾಡಬಹುದು ಎಂದು ಹೇಳಿದ್ದಾರೆ.