ಬೆಂಗಳೂರು: ಸ್ಯಾಮ್ಸಂಗ್ ಕಂಪನಿಯು ಗ್ಯಾಲಕ್ಸಿ F06 5G ಭಾರತದಲ್ಲಿ 5G ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 6300 SoC ಚಿಪ್ಸೆಟ್ ಹೊಂದಿದ್ದು 4 ವರ್ಷಗಳ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಅಪ್‌ಡೇಟ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, 50 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸಾರ್ ಪ್ರಮುಖ ವಿಶೇಷತೆಯಾಗಿದೆ.
ಗ್ಯಾಲಕ್ಸಿ F06 5G ಅನ್ನು ಫ್ಲಿಪ್‌ಕಾರ್ಟ್, ಸ್ಯಾಮ್ಸಂಗ್‌ನ ಅಧಿಕೃತ ಆನ್‌ಲೈನ್ ಸ್ಟೋರ್ ಮತ್ತು ಆಯ್ದ ಆಫ್‌ಲೈನ್ ಮಾರಾಟ ಮಳಿಗೆಗಳ ಮೂಲಕ ಖರೀದಿಸಲು ಸಾಧ್ಯವಿದೆ. ಇದು ಭಾರತದಲ್ಲಿ ಎರಡು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ F06 5G ಭಾರತದ ಬೆಲೆ
ಸ್ಯಾಮ್ಸಂಗ್ ಗ್ಯಾಲಕ್ಸಿ F06 5G ಭಾರತದಲ್ಲಿ ಎರಡು ವೇರಿಯಂಟ್‌ಗಳಲ್ಲಿ ಲಭ್ಯವಿದೆ. 4GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಮೂಲ ವೇರಿಯಂಟ್ ಬೆಲೆ ₹10,999 ಆಗಿದ್ದು, ಅದೇ ಸ್ಟೋರೇಜ್ ಹೊಂದಿರುವ 6GB RAM ಆಪ್ಷನ್ ₹11,499ಕ್ಕೆ ಲಭ್ಯವಿದೆ. ಸ್ಯಾಮ್ಸಂಗ್ ₹500 ಬ್ಯಾಂಕ್ ಕ್ಯಾಶ್‌ಬ್ಯಾಕ್ ಆಫರ್ ಕೂಡ ನೀಡುತ್ತಿದೆ. ಫೋನಿನ ಬೆಲೆಯನ್ನು ಈ ಕ್ಯಾಶ್‌ಬ್ಯಾಕ್ ಕಡಿಮೆ ಮಾಡಬಹುದು. ಗ್ರಾಹಕರು ಗ್ಯಾಲಕ್ಸಿ F06 5G ಅನ್ನು ಎರಡು ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು – ಬಹಾಮಾ ಬ್ಲೂ ಮತ್ತು ಲಿಟ್ ವೈಯೋಲೆಟ್.

ಸ್ಯಾಮ್ಸಂಗ್ ಗ್ಯಾಲಕ್ಸಿ F06 5G ಫೀಚರ್ಗಳು
ಡ್ಯುಯಲ್ ಸಿಮ್ ಹೊಂದಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ F06 5G ಒಂದು ದೊಡ್ಡ 6.7-ಇಂಚಿನ HD+ ರೆಸಲ್ಯೂಷನ್ ಮತ್ತು 800 ನಿಟ್ಸ್ ಬ್ರೈಟ್ನೆಸ್ ಹೊಂದಿರುವ ಡಿಸ್ಪ್ಲೇ ಹೊಂದಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 6300 SoC ನಿಂದ ಕಾರ್ಯನಿರ್ವಹಿಸುತ್ತಿದೆ. 6GB RAM ಮತ್ತು 128GB ಸ್ಟೋರೇಜ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ.
ಈ ಫೋನ್ ಆಂಡ್ರಾಯ್ಡ್ 15 ಆಧಾರಿತ One UI 7.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಸ್ಯಾಮ್ಸಂಗ್ ಈ ಹ್ಯಾಂಡ್‌ಸೆಟ್‌ಗೆ 4 ವರ್ಷಗಳ ಆಂಡ್ರಾಯ್ಡ್ OS ಅಪ್‌ಡೇಟ್‌ಗಳು ಮತ್ತು 4 ವರ್ಷಗಳ ಸುರಕ್ಷತಾ ಅಪ್‌ಡೇಟ್‌ಗಳನ್ನು ನೀಡುವುದಾಗಿ ಭರವಸೆ ನೀಡಿದೆ.
ಕ್ಯಾಮೆರಾ ಹೇಗಿದೆ?
ಕ್ಯಾಮೆರಾ ವಿಭಾಗದಲ್ಲಿ, ಗ್ಯಾಲಕ್ಸಿ F06 5G 50 ಮೆಗಾಪಿಕ್ಸೆಲ್ f/1.8 ಅಪರ್ಚರ್ ಇರುವ ಪ್ರಾಥಮಿಕ ಸೆನ್ಸಾರ್ ಜೊತೆಗೆ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿರುವ ಡ್ಯುಯಲ್ ರಿಯರ್ ಕ್ಯಾಮೆರಾ ಘಟಕ ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕಾಲಿಂಗ್‌ಗಾಗಿ ಈ ಫೋನ್ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಸಾಮರ್ಥ್ಯ
ಸ್ಯಾಮ್ಸಂಗ್ ಈ ಫೋನಿನಲ್ಲಿ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಇದೆ. ಇದು 25W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲ ನೀಡುತ್ತದೆ. ಸಂಪರ್ಕ ಆಯ್ಕೆಗಳಲ್ಲಿ, ಈ ಸ್ಮಾರ್ಟ್‌ಫೋನ್ ಭಾರತದಲ್ಲಿ 12 5G ಬ್ಯಾಂಡ್‌ಗಳಿಗೆ ಬೆಂಬಲ ನೀಡುತ್ತದೆ. ರಕ್ಷಣೆಗಾಗಿ, ಇದು ಸ್ಯಾಮ್ಸಂಗ್ ನಾಕ್ಸ್ ವಾಲ್ಟ್, ವಾಯ್ಸ್ ಫೋಕಸ್, ಮತ್ತು ಕ್ವಿಕ್ ಶೇರ್ ಫೀಚರ್ಗಳನ್ನು ಒಳಗೊಂಡಿದೆ. ಹಿಂಭಾಗದಲ್ಲಿ ರಿಪ್ಪಲ್ ಗ್ಲೋ ಫಿನಿಶ್ ಹೊಂದಿದ್ದು, ಪವರ್ ಬಟನ್ ಕೆಳಗೆ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಒದಗಿಸಲಾಗಿದೆ.