ಬೆಂಗಳೂರು: ಇನ್ಸ್ಟಾಗ್ರಾಮ್ನಲ್ಲಿ ನಾನಾ ಬಗೆಯ ಕಂಟೆಂಟ್ಗಳು ಸಿಗುತ್ತವೆ. ಮಕ್ಕಳು ಇಂಥ ಕಂಟೆಂಟ್ಗಳ ಬಗ್ಗೆ ಬೇಗ ಆಕರ್ಷಣೆಗೆ ಒಳಗಾಗುತ್ತವೆ ಎಂಬ ಆರೋಪ ಕೇಳಿ ಬಂದಿವೆ. ಹೀಗಾಗಿ ಭಾರತದಲ್ಲಿ ತನ್ನ ‘ಟೀನ್ ಅಕೌಂಟ್ಗಳು’ (Teen Accounts) ಎಂಬ ಫೀಚರ್ ಅಳವಡಿಸಿದೆ. ಮೆಟಾ ಮಾಲೀಕತ್ವದ ಪ್ಲಾಟ್ಫಾರ್ಮ್ನಲ್ಲಿ ಮಕ್ಕಳನ್ನು ಸುರಕ್ಷಿತವಾಗಿಡಲು ಕೈಗೊಳ್ಳುತ್ತಿರುವ ಕ್ರಮಗಳ ಭಾಗವಾಗಿದೆ.
ಈ ಫೀಚರ್ ಅಪ್ರಾಪ್ತ ವಯಸ್ಸಿನ ಬಳಕೆದಾರರ ಖಾತೆಗಳ ಕ್ರಿಯಾಶೀಲತೆ ಮೇಲೆ ನಿರ್ಬಂಧ ಹೇರುತ್ತದೆ. ಕೆಲವು ಸೆಟ್ಟಿಂಗ್ಗಳನ್ನು ಬದಲಾಯಿಸಲು ಪೋಷಕರ ಅನುಮತಿ ಅಗತ್ಯವಿರುತ್ತದೆ. 16 ವರ್ಷ ಮೇಲ್ಪಟ್ಟ ಬಳಕೆದಾರರ ಪೋಷಕರು ಕೂಡಾ ಮೇಲ್ವಿಚಾರಣಾ ಫೀಚರ್ಗಳನ್ನು ಸಕ್ರಿಯಗೊಳಿಸಬಹುದು. ಕೆಲವು ಶಬ್ದಗಳು ಮತ್ತು ವಾಕ್ಯಗಳು ಸಂದೇಶಗಳು ಮತ್ತು ಕಾಮೆಂಟ್ಗಳನ್ನು ಫಿಲ್ಟರ್ ಮಾಡುತ್ತವೆ.
ಹಂತ ಹಂತವಾಗಿ ಟೀನ್ ಅಕೌಂಟ್ಪರಿಚಯ
ಭಾರತದಲ್ಲಿ ಟೀನ್ ಅಕೌಂಟ್ಗಳ ವಿಸ್ತರಣೆಯನ್ನು ಘೋಷಿಸುವ ಬ್ಲಾಗ್ ಪೋಸ್ಟ್ಅನ್ನು ಇನ್ಸ್ಟಾಗ್ರಾಮ್ ಪ್ರಕಟಿಸಿದೆ. 16 ವರ್ಷಕ್ಕಿಂತ ಕಡಿಮೆ ಇರುವ ಬಳಕೆದಾರರು ಮತ್ತು ಹೊಸ 18 ವರ್ಷದೊಳಗಿನ ಖಾತೆಗಳು ಡಿಫಾಲ್ಟ್ ಆಗಿ ಖಾಸಗಿ (Private) ಆಗುತ್ತವೆ. ಖಾಸಗಿ ಖಾತೆಗಳನ್ನು ಅನುಮೋದಿತ ಬಳಕೆದಾರರಿಗೆ ಮಾತ್ರ ನೋಡಲು ಮತ್ತು ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ, ಇತರರು ಪೋಸ್ಟ್ಗಳನ್ನು ನೋಡಲು ಅಥವಾ ಕಾಮೆಂಟ್ ಮಾಡಲು ಸಾಧ್ಯವಿಲ್ಲ.
ಮಕ್ಕಳ ಸೇವೆಯಲ್ಲಿ ಸೇರಿಸಿದ ಖಾತೆಗಳಿಗೆ ಮಾತ್ರ ಸಂದೇಶ ಕಳುಹಿಸಲು ಅವಕಾಶ ನೀಡಲಾಗುತ್ತದೆ. ಟ್ಯಾಗ್ಗಳು ಮತ್ತು ಮೆನ್ಷನ್ಗಳಿಗೂ ನಿರ್ಬಂಧ ಇರುತ್ತದೆ. ಟೀನ್ ಅಕೌಂಟ್ಗಳಲ್ಲಿ ಕಿರುಕುಳ ನೀಡಲು ಅಥವಾ ಗೇಲಿ ಮಾಡಲು ಬಳಸಬಹುದಾದ ಅಪಾಯಕಾರಿ ಪದಗಳನ್ನು ತಡೆಗಟ್ಟಲು ಇನ್ಸ್ಟಾಗ್ರಾಮ್ ಕ್ರಮ ಕೈಗೊಳ್ಳಲಿದೆ.
ಇನ್ಸ್ಟಾಗ್ರಾಮ್ ಟೀನ್ ಅಕೌಂಟ್ಗಳಿಗೆ ನಿರ್ದಿಷ್ಟ ಕಂಟೆಂಟ್ಗಳ ಪ್ರವೇಶ ನಿರ್ಬಂಧವಿದೆ. . Explore ಟ್ಯಾಬ್ ಅಥವಾ Reels ನಲ್ಲಿ ಶಸ್ತ್ರಚಿಕಿತ್ಸೆ (cosmetic procedure) ಜಾಹೀರಾತುಗಳು ಮತ್ತು ಹಿಂಸಾತ್ಮಕ ವಿಡಿಯೋಗಳು ಬರುವುದಿಲ್ಲ. ದಿನಕ್ಕೆ 60 ನಿಮಿಷಗಳಷ್ಟು Instagram ಬಳಕೆ ಮಾಡಿದ ನಂತರ, ಆ್ಯಪ್ ಕ್ಲೋಸ್ ಮಾಡುವಂಗತೆ ಸೂಚಿಸಲಾಗುತ್ತದೆ. ರಾತ್ರಿಯ 10 ಗಂಟೆಯಿಂದ ಬೆಳಗಿನ 7 ಗಂಟೆ ವರೆಗೆ Sleep Mode ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳಲಿದೆ.
ವಯಸ್ಸು ಪರಿಶೀಲನೆ
ಹೊಸ ಫೀಚರ್ ಪ್ರಕಾರ ಪೋಷಕರು ತಮ್ಮ ಮಕ್ಕಳ Instagram ಚಟುವಟಿಕೆಗಳ ಮೇಲೆ ಕಣ್ಣಿಡಬಹುದು. ಕಳೆದ ಏಳು ದಿನಗಳಲ್ಲಿ ಯಾರು ಸಂದೇಶ ಕಳುಹಿಸಿದ್ದಾರೆ ಎಂಬ ಪಟ್ಟಿ ನೋಡಬಹುದು. ಆದರೆ, ಸಂದೇಶಗಳ ಮೂಲ ವಿಷಯವನ್ನು ಹಂಚಲಾಗುವುದಿಲ್ಲ. ಅದೇ ರೀತಿ ಪೋಷಕರು ದಿನನಿತ್ಯದ ಬಳಕೆ ಮಿತಿ ಬದಲಾಯಿಸಬಹುದು. ನಿರ್ದಿಷ್ಟ ಸಮಯದ ನಂತರ ನಿರ್ಬಂಧವಾಗುತ್ತದೆ.
ಇನ್ಸ್ಟಾಗ್ರಾಮ್ ಬಳಸುವಾಗ ಕೆಲವು ಮಕ್ಕಳು ತಮ್ಮ ಸರಿಯಾದ ವಯಸ್ಸನ್ನು ನೀಡುವುದಿಲ್ಲ ಎಂದು ಕಂಪನಿ ಹೇಳಿದೆ. ಇದನ್ನು ನಿಯಂತ್ರಿಸಲು, ಪ್ಲಾಟ್ಫಾರ್ಮ್ ವಯಸ್ಸು ಪರಿಶೀಲಿಸುವ ವಿಧಾನಗಳನ್ನು ಸುಧಾರಿಸುತ್ತಿದೆ, ಇದರಲ್ಲಿ ID ಕಾರ್ಡ್ಗಳ ಬಳಕೆ ಅಥವಾ ವೀಡಿಯೋ ಸೆಲ್ಫಿ ಮೂಲಕ ಪರಿಶೀಲನೆಯೂ ಸೇರಿದೆ. ಇದರ ಮೂಲಕ ಎಲ್ಲಾ ಅಪ್ರಾಪ್ತ ಬಳಕೆದಾರರ ಖಾತೆಗಳನ್ನು ಟೀನ್ ಅಕೌಂಟ್ಗಳಾಗಿ ಗುರುತಿಸಲು ಇನ್ಸ್ಟಾಗ್ರಾಮ್ ಪ್ರಯತ್ನಿಸುತ್ತಿದೆ.