ಬೆಂಗಳೂರು: ನಟೋರಿಯಸ್ ರೌಡಿಶೀಟರ್ ನನ್ನು ಗುಂಡಾ ಕಾಯ್ದೆಯಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಟೋರಿಯಸ್ ರೌಡಿಶೀಟರ್ ಮಹಮ್ಮದ್ ಅಲಿಯಾಸ್ ಅಕ್ರಂ ಎಂಬಾತನನ್ನು ಪೊಲೀಸರು ಗೂಂಡಾ ಕಾಯ್ದೆಯಡಿ ಅರೆಸ್ಟ್ ಮಾಡಿದ್ದಾರೆ.
ರೌಡಿಶೀಟರ್ ಅಕ್ರಂನ ಹಿಂದೆ ದೊಡ್ಡ ಕ್ರೈಮ್ ಸ್ಟೋರಿಯಿದೆ. 2011ರಿಂದ ಇಲ್ಲಿಯವರೆಗೂ ಈತನ ಮೇಲೆ 21 ಕೇಸ್ ದಾಖಲಾಗಿವೆ. ಕೊಲೆ, ಕೊಲೆ ಯತ್ನ, ಸುಲಿಗೆ, ಕಳ್ಳತನ, ದರೋಡೆ, ಸಾಕ್ಷಿಗಳಿಗೆ ಬೆದರಿಕೆ, ದರೋಡೆ ಸೇರಿದಂತೆ ಹಲವು ರೀತಿಯ ಗಂಭೀರ ಕೇಸ್ ಗಳು ಈತನ ಮೇಲಿವೆ.
ಅಕ್ರಂ ಮೇಲಿರುವ 21 ಕೇಸ್ ಪೈಕಿ ಹಲವು ಕೇಸ್ ನಲ್ಲಿ ಅರೆಸ್ಟ್ ಆಗಿ ಈಗಾಗಲೇ ಆತ ಜೈಲು ಸೇರಿದ್ದ. ಜೈಲಿನಿಂದ ಹೊರ ಬರುತ್ತಿದ್ದಂತೆ ಮತ್ತೆ ಆರು ಕೇಸ್ ದಾಖಲಾಗಿವೆ. ಆದರೆ, ಇತ್ತೀಚೆಗೆ ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿದ್ದ. ಆರು ಕೇಸ್ ಕುರಿತಂತೆ ವಾರೆಂಟ್ ಜಾರಿಯಾಗಿತ್ತು. ಈಗ ಗೋವಿಂದಪುರ ಇನ್ಸ್ ಪೆಕ್ಟರ್ ಜಯರಾಜ್ ಆರೋಪಿಯನ್ನು ಬಂಧಿಸಿದ್ದಾರೆ. ಗೂಂಡಾ ಕಾಯ್ದೆಯಡಿ ಆರೋಪಿ ಬಂಧಿಸಿ ಕಲಬುರಗಿ ಜೈಲಿಗೆ ಅಟ್ಟಿದ್ದಾರೆ.