ಬೆಂಗಳೂರು: ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿಯಾಗಿರುವ ಘಟನೆ ನಡೆದಿದೆ.
ಈ ಘಟನೆ ಮೈಸೂರು ರಸ್ತೆಯ ನಾಯಂಡಹಳ್ಳಿ ಹತ್ತಿರ ನಡೆದಿದೆ. ಕಾಮಾಕ್ಷಿಪಾಳ್ಯದ ಸರೋಜಾ(42) ಸಾವನ್ನಪ್ಪಿರುವ ದುರ್ದೈವಿ.
ಕಾರಿನ (Car) ಡೋರ್ ಗೆ ಬೈಕ್ ಡಿಕ್ಕಿಯಾದ (Accident) ಪರಿಣಾಮ ಮಹಿಳೆ ನೆಲಕ್ಕೆ ಬಿದ್ದಿದ್ದಾರೆ. ನೆಲಕ್ಕೆ ಬಿದ್ದ ಮಹಿಳೆಯ ಮೇಲೆ ಬಿಎಂಟಿಸಿ ಬಸ್ (BMTC Bus) ಹರಿದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ.
ಸಾವನ್ನಪ್ಪಿರುವ ಮಹಿಳೆ ಸಹೋದರನೊಂದಿಗೆ ತೆರಳುತ್ತಿದ್ದರು. ಜ್ಞಾನಭಾರತಿಯಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಮರಳಿ ಬರುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ನಿಂತಿದ್ದ ಕಾರಿನ ಡೋರ್ ನ್ನು ಏಕಾಏಕಿ ತೆಗೆಯಲಾಗಿದೆ. ಆಗ ಡೋರ್ ಗೆ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ಕೆಳಗೆ ಬಿದ್ದಿದ್ದಾರೆ. ಆಗ ಹಿಂಬದಿಯಿಂದ ಬಂದಿದ್ದ ಬಿಎಂಟಿಸಿ ಬಸ್, ಮಹಿಳೆಯ ಮೇಲೆ ಹರಿದಿದೆ. ಪರಿಣಾಮ ಸರೋಜಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.