ಚಿಕ್ಕಮಗಳೂರು: ನಾಪತ್ತೆಯಾಗಿದ್ದ ನಕ್ಸಲ್ ರವಿ ಕೋಟೆ(Ravi Kote Honda) ಹೊಂಡ ಶರಣಾಗತರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಎದುರು ಇತ್ತೀಚೆಗಷ್ಟೇ ಶರಣಾಗಿದ್ದ 6 ಜನ ನಕ್ಸಲರ ತಂಡದಲ್ಲಿ ರವಿ ಕೋಟೆಹೊಂಡ ಕೂಡ ಇದ್ದರು. ಆದರೆ ವಿಕ್ರಂಗೌಡ್ಲು (Vikrangoudlu) ಎನ್‌ಕೌಂಟರ್ ವೇಳೆ ಪರಾರಿಯಾಗಿದ್ದ ರವಿ ಈಗ ಪೊಲೀಸರ(police) ಮುಂದೆ ಶರಣಾಗಿದ್ದಾರೆ.
ಈ ಮೂಲಕ ಶಸ್ತ್ರಾಸ್ತ್ರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಎಲ್ಲ ಮಾವೋವಾದಿಗಳು ಮುಖ್ಯ ವಾಹಿನಿಗೆ ಬಂದಂತಾಗಿದೆ. ಕರ್ನಾಟಕ,(karnataka) ತಮಿಳುನಾಡು,(tamilanadu) ಕೇರಳದ (kerala)ಗಡಿಭಾಗದಲ್ಲಿ 8 ಜನ ಕರ್ನಾಟಕ ತಂಡದ ನಕ್ಸಲರು ಸಕ್ರಿಯವಾಗಿದ್ದರು. ಈ ತಂಡಕ್ಕೆ ವಿಕ್ರಂಗೌಡ್ಲು ಕಮಾಂಡರ್ ಆಗಿದ್ದರು. ಉಡುಪಿ ಜಿಲ್ಲೆಯ ಹೆಬ್ರಿ ಅರಣ್ಯ ಪ್ರದೇಶದಲ್ಲಿ (Hebri forest area) ನಕ್ಸಲ್ ಕಮಾಂಡರ್ ಆಗಿದ್ದ ವಿಕ್ರಮ್ ಗೌಡ್ಲು ಎನ್ ಕೌಂಟರ್‌ನಲ್ಲಿ ಹತ್ಯೆಯಾಗಿದ್ದ.
ಈ ವೇಳೆ ರವಿ ಕೂಡ ಇದ್ದರು. ರವಿ ಹಲವಾರು ವರ್ಷಗಳಿಂದ ಮಾವೋವಾದಿ ಚಟುವಟಿಕೆಯಲ್ಲಿ ಭಾಗವಹಿಸಿದ್ದರು. ಈ ಎನ್ ಕೌಂಟರ್ ನಂತರ 6 ಜನ ಮಾವೋವಾದಿಗಳು ಮಂಡೆಗಾರು ಲತಾ (Mandegaru Lata) ನೇತೃತ್ವದಲ್ಲಿ ಶರಣಾಗತರಾಗಿದ್ದರು. 6 ಮಂದಿ ನಕ್ಸಲರು ಶರಣಾಗತರಾಗಿದ್ದರೂ ರವಿ ಕೋಟೆಹೊಂಡ ಸುಳಿವು ಇರಲಿಲ್ಲ. ರವಿ ಶೃಂಗೇರಿ ಭಾಗದ ಅರಣ್ಯ ಪ್ರದೇಶದ ಸಮೀಪದ ನಿವಾಸಿಯೊಬ್ಬರ ಸಂಪರ್ಕ ಮಾಡಿ ದಿನಸಿ ಪಡೆದು ಶರಣಾಗತರಾಗುವ ಇಚ್ಛೆ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಈ ಮಾಹಿತಿಯನ್ನು ಪೊಲೀಸರಿಗೆ ನೀಡುವಂತೆ ಸೂಚಿಸಿದ್ದರು ಎನ್ನಲಾಗಿದೆ. ಹೀಗಾಗಿ ಈಗ ಶರಣಾಗತಿ ಪ್ರಕ್ರಿಯೆ ನಡೆದಿದಿದೆ. ಈಗ ನೆಮ್ಮಾರ್ ಫಾರೆಸ್ಟ್ ಐಬಿಯಲ್ಲಿ ಪೊಲೀಸರ ಮುಂದೆ ರವಿ ಶರಣಾಗತರಾಗಿದ್ದಾರೆ.
ಹಲವು ವರ್ಷಗಳಿಂದ ಅರಣ್ಯದ ಹೊರಭಾಗದಲ್ಲಿದ್ದು ಭೂಗತರಾಗಿದ್ದ ಮಹಿಳಾ ಮಾವೋವಾದಿ ತೊಂಬಟ್ಟು ಲಕ್ಷ್ಮೀ ಭಾನುವಾರ ಶರಣಾಗತರಾಗಲಿದ್ದಾರೆ. ಚಿಕ್ಕಮಗಳೂರು(Chikmagalur) ಅಥವಾ ಉಡುಪಿಯಲ್ಲಿ(udupi) ಪೊಲೀಸರ ಮುಂದೆ ಶರಣಾಗತರಾಗಲಿದ್ದಾರೆ ಎನ್ನಲಾಗಿದೆ. ಈ ಮೂಲಕ ರಾಜ್ಯವು ನಕ್ಸಲ್ ಮುಕ್ತವಾಗಿದೆ.