ಹಾಸನ: ನಡು ರಸ್ತೆಯಲ್ಲೇ ಪುಡಿ ರೌಡಿಯೊಬ್ಬ ಅಟ್ಟಹಾಸ ಮೆರೆದು ಜನರಿಗೆ ತೊಂದರೆ ಮಾಡಿರುವ ಘಟನೆ ನಡೆದಿದೆ.
ಹಾಸನ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಖಾಸಗಿ ಬಸ್ (Private Bus) ತಡೆದು ಪುಡಿ ರೌಡಿ ಅಟ್ಟಹಾಸ ಮೆರೆದು ಲಾಂಗ್‌ನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಬೆಂಗಳೂರಿನಿಂದ ಮಂಗಳೂರಿಗೆ (Bengaluru To Mangaluru) ಖಾಸಗಿ ಬಸ್ ಸಂಚರಿಸುತ್ತಿದ್ದ ವೇಳೆ ಕೆಎ 51 ಎಂವಿ 8912 ನಂಬರ್‌ನ ಸ್ವಿಫ್ಟ್ ಕಾರನ್ನು ಬಸ್ಸಿನ ಮುಂದೆ ಅಡ್ಡ ಹಾಕಿ ನಿಲ್ಲಿಸಿದ್ದಾನೆ. ಕಾರಿನಿಂದ ಇಳಿದು ಗಲಾಟೆ ಮಾಡಿ ಬಸ್ಸಿನ ಗ್ಲಾಸನ್ನು ಒಡೆದು ಹಾಕಿ, ಹಲ್ಲೆಗೆ ಯತ್ನಿಸಿದ್ದಾನೆ.
ಪುಡಿ ರೌಡಿಯ ಹುಚ್ಚಾಟ ಬಸ್ಸಿನಲ್ಲಿದ್ದವರ ಮೊಬೈಲಿನಲ್ಲಿ ಸೆರೆಯಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social network) ವೈರಲ್ ಆಗುತ್ತಿದ್ದಂತೆ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.