ಬೆಳಗಾವಿ: ಮಹಾ ಕುಂಭಮೇಳದ (Maha Kumbh Mela) ಮೌನಿ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಜನಸ್ತೋಮದಿಂದಾಗಿ ಉಂಟಾದ ಕಾಲ್ತುಳಿತದಲ್ಲಿ (Stampede) ಸಾವನ್ನಪ್ಪಿರುವ ನಾಲ್ವರ ಶವ ಇಂದು ವಿಮಾನದ ಮೂಲಕ ಬೆಳಗಾವಿಗೆ (Belagavi) ಆಗಮಿಸಲಿದೆ.
ಪ್ರಯಾಗ್‌ರಾಜ್‌ನಿಂದ (Prayagraj) ಬುಧವಾರ ರಾತ್ರಿಯೇ ಅಂಬುಲೆನ್ಸ್ ಮೂಲಕ ಶವಗಳು ಹೊರಟಿದ್ದು ಬೆಳಗ್ಗೆ ದೆಹಲಿಗೆ ಬಂದು ತಲುಪಿವೆ. ಇಂದು ಮಧ್ಯಾಹ್ನ 3:30ಕ್ಕೆ ದೆಹಲಿಯಿಂದ (Delhi) ಹೊರಟ ವಿಮಾನ ಸಂಜೆ 5:30ಕ್ಕೆ ಬೆಳಗಾವಿಗೆ ಆಗಮಿಸಲಿದೆ.
ಒಂದು ಅಂಬುಲೆನ್ಸ್‌ನಲ್ಲಿ ಜ್ಯೋತಿ ಹತ್ತರವಾಠ (44) ಮತ್ತು ಮಗಳು ಮೇಘಾ ಹತ್ತರವಾಠ(24) ಅವರ ಶವ ಇದ್ದರೆ ಮತ್ತೊಂದು ಅಂಬುಲೆನ್ಸ್‌ನಲ್ಲಿ ಶೆಟ್ಟಿ ಗಲ್ಲಿಯ ಅರುಣ್ ಕೋಪರ್ಡೆ(61), ಶಿವಾಜಿನಗರದ ಮಹಾದೇವಿ ಬಾವನೂರ(48) ಮೃತ ದೇಹವಿದೆ. ಬೆಳಗಾವಿ ಡಿಸಿ ಮೊಹಮ್ಮದ್ ಅವರು ಶವ ಸುಗಮವಾಗಿ ನಗರಕ್ಕೆ ಬರಲು ಇಬ್ಬರು ವಿಶೇಷ ಅಧಿಕಾರಿಗಳನ್ನು ದೆಹಲಿಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಯಾಗ್‌ರಾಜ್ ದುರಂತದಲ್ಲಿ ಸಿಲುಕಿರಬಹುದಾದ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, 080-22340676 ಸಹಾಯವಾಣಿಗೆ ಕರೆ ಮಾಡುವಂತೆ ಸೂಚಿಸಿದೆ.