ಬೆಂಗಳೂರು: ಉದ್ಯೋಗದ(job) ಆಸೆ ತೋರಿಸಿ ಯುವತಿಯರನ್ನು ವೇಶ್ಯಾವಾಟಿಕೆಗೆ(Prostitution) ತಳ್ಳುತ್ತಿದ್ದ ಮಹಿಳೆಯರಿಬ್ಬರನ್ನು ಪೊಲೀಸರು (police)ಬಂಧಿಸಿರುವ ಘಟನೆ ನಡೆದಿದೆ. ಸಿಸಿಬಿ WPWನಿಂದ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ. ಉಮಾ,(Uma) ಪುಷ್ಪಲತಾ(pushpalata) ಬಂಧಿತ ಇಬ್ಬರು ಆರೋಪಿಗಳು ಎನ್ನಲಾಗಿದೆ. ಹೊರ ರಾಜ್ಯದಿಂದ ಕೆಲಸ ಅರಸಿ ಬರುತ್ತಿದ್ದ ಯುವತಿಯರನ್ನು ಟಾರ್ಗೆಟ್ ಮಾಡಿ, ಅವರಿಗೆ ಕೆಲಸದ ಆಸೆ ತೋರಿಸಿ ವೇಶ್ಯವಾಟಿಕೆ ದಂಧೆಗೆ ದೂಡುತ್ತಿದ್ದರು ಎನ್ನಲಾಗಿದೆ.
ಬಂಧಿತ ಆರೋಪಿಗಳು ಬ್ಯಾಡರಹಳ್ಳಿ ಪೊಲೀಸ್ ಠಾಣಾ(police station) ವ್ಯಾಪ್ತಿಯ ಬಿಇಎಲ್ ಬಡಾವಣೆಯಲ್ಲಿ ಹೈ ಫೈ ಮನೆ ಬಾಡಿಗೆ ಪಡೆದಿದ್ದರು. ಮನೆ ಮಾಲೀಕರಿಗೆ ಪತಿ ಇಲ್ಲ ಎಂದು ಸುಳ್ಳು ಹೇಳಿ, ದಂಧೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ಗಿರಾಕಿಗಳನ್ನು ಫೋನ್ ಮೂಲಕ ಸಂಪರ್ಕ ಮಾಡಿ ಫೋಟೋಗಳನ್ನು(photo) ಕಳುಹಿಸಿ ಡೀಲ್ ಮಾಡಿ ಮನೆಗೆ ಕರೆಸಿ ದಂಧೆ ನಡೆಸುತ್ತಿದ್ದರು ಎಂಬ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಮಹಿಳಾ ಸಂರಕ್ಷಣಾ ಘಟಕದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಇಬ್ಬರು ಮಹಿಳೆಯರನ್ನು ಬಂಧಿಸಿ, ಓರ್ವ ಯುವತಿಯನ್ನು ರಕ್ಷಿಸಲಾಗಿದೆ. ಈ ಕುರಿತು ಬ್ಯಾಡರಹಳ್ಳಿ(Badarahalli) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಅಲ್ಲದೇ, ಇದೇ ರೀತಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯ ಹಲವು ಪ್ರದೇಶಗಳಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ ನಡೆಸಿದೆ. ಸಂಪಿಗೇಹಳ್ಳಿ, ಕೆಆರ್ ಪುರಂ, ರಾಮಮೂರ್ತಿ ನಗರ, ಹನುಮಂತ ನಗರ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆದಿವೆ. ಐಷಾರಾಮಿ ಹೋಟೆಲ್, ಅಪಾರ್ಟ್ಮೆಂಟ್, ಮನೆಗಳಲ್ಲಿ ದಂಧೆ ನಡೆಸಿತ್ತಿದ್ದ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ವಿದೇಶಿ ಮತ್ತು ಹೊರ ರಾಜ್ಯದ ಯುವತಿಯರನ್ನು ಬಳಸಿಕೊಂಡು ದಂಧೆ ಮಾಡುತ್ತಿದ್ದರು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿ, 9 ಮಹಿಳೆಯರನ್ನು ರಕ್ಷಿಸಲಾಗಿದೆ.