ಹುಬ್ಬಳ್ಳಿ: ಪತ್ನಿಯ (Wife) ಕಿರುಕುಳಕ್ಕೆ ಬೇಸತ್ತು ಪತಿ(Husband) ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ನಗರದ (Hubballi) ಚಾಮುಂಡೇಶ್ವರಿ ನಗರದಲ್ಲಿ ಈ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಪೀಟರ್ ಎನ್ನಲಾಗಿದೆ. ಪೀಟರ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಸಾವಿಗೂ ಮುನ್ನ ಡೆತ್ ನೋಟ್ ಬರೆದಿದ್ದಾರೆ. ಡ್ಯಾಡಿ ಆಯಮ್ ಸಾರಿ, ಪಿಂಕಿ ಇಸ್ ಕಿಲ್ಲಿಂಗ್ ಮೀ ಸೀ ವಾಂಟ್ ಮೈ ಡೆತ್ ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಲ್ಲದೇ, ಶವ ಪೆಟ್ಟಿಗೆ ಮೇಲೆ ಹೆಂಡತಿ ಟಾರ್ಚರ್ ನಿಂದ ಸಾವು’ ಎಂದು ಬರೆಸುವಂತೆ ಡೆತ್ ನೋಟ್ ಬರೆದಿದ್ದಾರೆ. ಪೀಟರ್ ಆಸೆಯಂತೆ ಶವ ಪೆಟ್ಟಿಗೆ ಮೇಲೆ
ಮೈ ಡೆತ್ ಬಿಕಾಸ್ ಆಫ್ ಮೈ ವೈಫ್ ಟಾರ್ಚರ್’ ಎಂದು ಕುಟುಂಬಸ್ಥರು ಬರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಪೀಟರ್ ಪತ್ನಿ ಖಾಸಗಿ ಶಾಲೆ ಶಿಕ್ಷಕಿಯಾಗಿದ್ದು, ಇತ್ತೀಚಿಗೆ ಬೇರೆ ವ್ಯಕ್ತಿ ಜೊತೆಗೆ ಸುತ್ತಾಟ ನಡೆಸುತ್ತಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ, ನನ್ನ ಜೀವನ ನನ್ನಿಷ್ಟ ಎಂದು ಉತ್ತರ ನೀಡಿದ್ದರು. ಹೀಗಾಗಿ ಆತ ನೊಂದಿದ್ದ. ಪತ್ನಿ ಹಲವಾರು ತಿಂಗಳುಗಳಿಂದ ಪತಿಯಿಂದ ದೂರವಿದ್ದಳು ಎನ್ನಲಾಗಿದೆ.
ವಿಚ್ಚೇದನಕ್ಕೆ (Divorce) ಅರ್ಜಿ ಹಾಕಿದ್ದಳು. ಆಕೆ ವಕೀಲರ ಮೂಲಕ 20 ಲಕ್ಷ ರೂ ಬೇಡಿಕೆ ಇಟ್ಟಿದ್ದಳು. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಘಟನೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.