ಭಾರತದ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಉತ್ತಮ ಫಾರ್ಮ್ ಹೊಂದಿಲ್ಲ. 36 ವರ್ಷದ ಆಟಗಾರ ಇತ್ತೀಚಿನ ಪಂದ್ಯಗಳಲ್ಲಿ ತಮ್ಮ ಬ್ಯಾಟಿಂಗ್ ತಂತ್ರ ಪ್ರಯೋಗಿಸಲಾಗದೇ ಹೆಣಗಾಡುತ್ತಿದ್ದಾರೆ. ಆದಾಗ್ಯೂ, ಕೊಹ್ಲಿ ತಮ್ಮ ದೌರ್ಬಲ್ಯ ನಿವಾರಿಸುವ ಮತ್ತು ದೆಹಲಿ ಪರ ರಣಜಿ ಟ್ರೋಫಿ ಪಂದ್ಯಕ್ಕೆ ಮುಂಚಿತವಾಗಿ ಫಾರ್ಮ್ ಮರಳಿ ಪಡೆಯುವ ಗುರಿ ಹೊಂದಿದ್ದಾರೆ. ಅವರು ಭಾರತದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರೊಂದಿಗೆ ನೆಟ್‌ನಲ್ಲಿ ಅಭ್ಯಾಸ ಮಾಡಿಡುತ್ತಿದ್ದಾರೆ.
ಭಾರತ ತಂಡದ ಕೋಚ್ ಗೌತಮ್ ಗಂಭೀರ್ ಹಾಗೂ ಬ್ಯಾಟಿಂಗ್ ಕೋಚ್ ಅಭಿಷೇಕ್ ನಾಯರ್ ಅವರನ್ನು ಬಿಟ್ಟು ಆರ್‌ಸಿಬಿಯ ಮಾಜಿ ಕೋಚ್ ಬಂಗಾರ್ ಮೊರೆ ಹೋಗಿದ್ದಾರೆ ಕೊಹ್ಲಿ. ಆರ್‌ಸಿಬಿಯಲ್ಲಿ ಬಂಗಾರ್ ಬ್ಯಾಟಿಂಗ್ ಕೋಚ್ ಆಗಿದ್ದ ವೇಳೆಯಲ್ಲಿ ಕೊಹ್ಲಿಯ ಪ್ರದರ್ಶನ ಉತ್ತುಂಗದಲ್ಲಿತ್ತು. ಹೀಗಾಗಿ ಅವರ ಮೊರೆ ಹೋಗಿದ್ದಾ ಕೊಹ್ಲಿ
ವಿರಾಟ್ ಕೊಹ್ಲಿಗಾಗಿ ಸಂಜಯ್ ಬಂಗಾರ್ ಸ್ವಲ್ಪ ಸಮಯ ಮೀಸಲಿಟ್ಟಿದ್ದಾರೆ. ಕೊಹ್ಲಿಗಾಗಿ ಮುಂಬೈ ಕ್ರಿಕೆಟ್ ಸೌಲಭ್ಯದಲ್ಲಿ ತರಬೇತಿ ಅಧಿವೇಶನವನ್ನು ಆಯೋಜಿಸಿದ್ದರು. ಇದನ್ನು ಅವರು ವೈಯಕ್ತಿಕವಾಗಿ ಮಾಡುತ್ತಿದ್ದಾರೆ. ೧೬ ಯಾರ್ಡ್‌ನಲ್ಲಿ ಥ್ರೋಡೌನ್ ಮಾಡುವ ಮೂಲಕ ಅವರನ್ನು ಸಜ್ಜುಗೊಳಿಸಿದ್ದಾರೆ.
ಕೊಹ್ಲಿ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಸಂಜಯ್ ಬಂಗಾರ್ ಭಾರತದ ಬ್ಯಾಟಿಂಗ್ ಕೋಚ್ ಆಗಿದ್ದರು. ಬಂಗಾರ್ ಈ ಹಿಂದೆ ಆರ್‌ಸಿಬಿ ತಂಡದ ನಿರ್ವಹಣೆಯಲ್ಲಿ ಕೊಹ್ಲಿಯೊಂದಿಗೆ ಕೆಲಸ ಮಾಡಿದ್ದಾರೆ.
ಬ್ಯಾಕ್‌ಫೂಟ್ ತಂತ್ರ
ಸ್ಟಂಪ್‌ನ ಹೊರಗೆ ಹೋಗುವ ಚೆಂಡುಗಳನ್ನು ಆರಾಮವಾಗಿ ಆಡಲು ಕೊಹ್ಲಿಗೆ ನೆರವಾಗುವಂತೆ ಬ್ಯಾಕ್‌ಫೂಟ್ ಆಟವನ್ನು ಅಭಿವೃದ್ಧಿಪಡಿಸುವುದು ಬಂಗಾರ್ ಅವರ ಗುರಿಯಾಗಿತ್ತು. ಸ್ಟಂಪ್‌ನ ಹೊರಗೆ ಚೆಂಡು ಹೋಗುವಂತೆ ಮಾಡುವುದಕ್ಕೆ ವ್ಯವಸ್ಥೆ ಮಾಡಿ ಬಂಗಾರ್ ಬೌಲಿಂಗ್ ಮಾಡಿದರು.
ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಇಂತಹ ಎಸೆತಗಳ ವಿರುದ್ಧ ಕೊಹ್ಲಿ ಸಾಕಷ್ಟು ಹೆಣಗಾಡಿದ್ದರು. ಅಲ್ಲಿ ಫುಲ್ ಲೆಂತ್ ಚೆಂಡುಗಳು ಬೌನ್ಸ್ ಆಗುತ್ತಿದ್ದವು. ಅದನ್ನು ಎದುರಿಸಲು ಸಾಧ್ಯವಾಗದೇ ಕೊಹ್ಲಿ ಪದೇ ಪದೆ ಔಟ್ ಆಗಿದ್ದರು.
ಸ್ಕೋರ್ ಮಾಡುವುದು ಅಗತ್ಯ
ವಿರಾಟ್ ಕೊಹ್ಲಿ ಸ್ವಾಭಾವಿಕವಾಗಿ ಫಾರ್ವರ್ಡ್ ಆಟಗಾರ. ಅವರು ಬ್ಯಾಕ್-ಫೂಟ್ ಆಟವನ್ನು ಹೆಚ್ಚು ಅವಲಂಬಿಸುವುದಿಲ್ಲ ಎಂಬುದನ್ನು ಗಮನಿಸಬೇಕು. ಆದಾಗ್ಯೂ, ಚೆಂಡುಗಳು ತಡವಾಗಿ ಚಲಿಸುವ ವಿದೇಶಿ ಪರಿಸ್ಥಿತಿಗಳಲ್ಲಿ ಬ್ಯಾಕ್ ಫೂಟ್ ಆಟ ಬೇಕಾಗುತ್ತದೆ.
ಹಲವು ವರ್ಷಗಳಿಂದ, ಕೊಹ್ಲಿ ತಮ್ಮ ಟ್ರೇಡ್‌ಮಾರ್ಕ್ ಕವರ್ ಡ್ರೈವ್ ಅನ್ನು ಅವಲಂಬಿಸಿದ್ದಾರೆ. ಆದರೆ ಈ ಶಾಟ್ ಕಳೆದ ಕೆಲವು ತಿಂಗಳುಗಳಿಂದ ಅವರ ವಿಕೆಟ್ ನಷ್ಟಕ್ಕೆ ಕಾರಣವಾಗಿದೆ. ಅಭ್ಯಾಸದ ಅವಧಿಯಲ್ಲಿ ಅವರು ತಮ್ಮ ದೌರ್ಬಲ್ಯವನ್ನು ಸರಿಪಡಿಸುವ ಜತೆಗೆ ಸ್ಕೋರ್ ಮಾಡುವ ಸಾಮರ್ಥ್ಯವನ್ನು ಹಾಗೆಯೇ ಉಳಿಸಿಕೊಳ್ಳುವುದಾಗಿದೆ.
ವಿರಾಟ್ ಕೊಹ್ಲಿಯ ಇತ್ತೀಚಿನ ಟೆಸ್ಟ್ ಫಾರ್ಮ್
ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಅಲ್ಲಿ ಅವರು ಐದು ಟೆಸ್ಟ್ ಪಂದ್ಯಗಳಲ್ಲಿ 23.75 ಸರಾಸರಿಯಲ್ಲಿ 190 ರನ್ ಗಳಿಸಿದ್ದರು. ಸ್ಟಂಪ್‌ನ ಹೊರ ಹೋಗುವ ಚೆಂಡುಗಳಿಂದ ಅವರು ನಿರಂತರವಾಗಿ ತೊಂದರೆಗೀಡಾಗುತ್ತಿದ್ದರು. ವಿಕೆಟ್ ಕೀಪರ್ ಮತ್ತು ಸ್ಲಿಪ್ ಫೀಲ್ಡರ್‌ಗಳಿಗೆ ಕ್ಯಾಚ್ ನೀಡಿ ಔಟಾಗಿದ್ದರು.
ಮುಂಬರುವ ರಣಜಿ ಟ್ರೋಫಿ ಪಂದ್ಯವನ್ನು ಆಡಿದ ನಂತರ, ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಂತರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿ ಅವರು ಭಾರತದ ಮಿಂಚಬೇಕಾಗಿದೆ. 36ರ ಹರೆಯದ ಕೊಹ್ಲಿ ಐಸಿಸಿ ಟೂರ್ನಿಗಳು ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ.