ವಾಷಿಂಗ್ಟನ್: ಭಾರತಕ್ಕೆ ದೊಡ್ಡ ಜಯವೊಂದು ಸಿಕ್ಕಿದ್ದು, 2008ರಲ್ಲಿ ನಡೆದಿದ್ದ 26/11 ದಾಳಿಯ ಪ್ರಮುಖ ಸೂತ್ರಧಾರಿ ತಹವ್ವೂರ್ ಹುಸೇನ್ ರಾಣಾನನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಅಮೆರಿಕ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.
ಮುಂಬೈ ದಾಳಿಯಲ್ಲಿ ಭಾರತಕ್ಕೆ ಬೇಕಾಗಿರುವ ಭಯೋತ್ಪಾದಕ ತಹವ್ವೂರ್ ಹುಸೇನ್ ರಾಣಾನನ್ನು, ಭಾರತಕ್ಕೆ ಗಡಿಪಾರು ಮಾಡುವಂತೆ ಅಮೆರಿಕದ ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ಭಾರತೀಯ ರಾಜತಾಂತ್ರಿಕತೆಗೆ ದೊಡ್ಡ ಜಯ ಸಿಕ್ಕಂತಾಗಿದೆ.
ಅಧೀನ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ರಾಣಾ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ಅಮೆರಿಕದ ಸುಪ್ರೀಂಕೋರ್ಟ್, ಭಾರತಕ್ಕೆ ಹಸ್ತಾಂತರ ಮಾಡಲು ಸಮ್ಮತಿ ಸೂಚಿಸಿದೆ.
ಭಯೋತ್ಪಾದಕನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಭಾರತದ ತನಿಖಾ ಸಂಸ್ಥೆಗಳು ಅಮೆರಿಕ ಕೋರ್ಟ್ ನಲ್ಲಿ 2009ರಿಂದಲೂ ಕಾನೂನು ಹೋರಾಟ ನಡೆಸಿವೆ. ಈಗಾಗಲೇ ರಾಣಾ, ಲಾಸ್ ಏಂಜಲಿಸ್‌ನ ಮೆಟ್ರೋಪಾಲಿಟನ್ ಡಿಟೆನ್‌ಷನ್ ಸೆಂಟರ್ ನಲ್ಲಿ ಬಂಧನದಲ್ಲಿದ್ದಾನೆ.