ಬೆಂಗಳೂರು: ಸಿನಿಮಾ, ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿರುವ ನಟಿ ಶಶಿಕಲಾ ಅಲಿಯಾಸ್ ಸುಶೀಲಮ್ಮ ಬೆದರಿಕೆ ಹಾಕಿ ವಿವಾಹ ಆಗುವಂತೆ ಮಾಡಿದ್ದಾರೆಂದು ನಿರ್ದೇಶಕರೊಬ್ಬರು ದೂರು ದಾಖಲಿಸಿದ್ದಾರೆ.
ಶಶಿಕಲಾ, ‘ಪ್ರಜಾರಾಜ್ಯ’ ಹೆಸರಿನ ಸಿನಿಮಾದಲ್ಲಿ ನಟಿಸುವಾಗ ನಿರ್ದೇಶಕ ಡಿಜೆ ಹರ್ಷವರ್ಧನ ಅಲಿಯಾಸ್ ವಿಜಯಭಾರ್ಗವ ಎಂಬುವವರ ಪರಿಚಯವಾಗಿತ್ತು. ಆನಂತರ ಅವರಿಬ್ಬರೂ ಒಟ್ಟಾಗಿ ಜೀವನ ಸಾಗಿಸುತ್ತಿದ್ದರು.
ಆದರೆ, ಆನಂತರ ಹರ್ಷವರ್ಧನ ತನ್ನನ್ನು ಬಿಟ್ಟು ಬೇರೆಯವರೊಂದಿಗೆ ಹೋಗಿದ್ದಾನೆಂದು ನಟಿ ದೂರು ನೀಡಿದ್ದರು. ಹೀಗಾಗಿ ಹರ್ಷವರ್ಧನ್ ದೂರು ಹಿಂಪಡೆಯುವಂತೆ ಹೇಳಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಈಗ ಈ ಮದುವೆ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಬೆದರಿಕೆ ಹಾಕಿ ಈ ರೀತಿ ಮದುವೆ ಮಾಡಿಕೊಂಡಿದ್ದಾರೆಂದು ನಿರ್ದೇಶಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಶಶಿಕಲಾ ವಿರುದ್ಧ ನಿರ್ದೇಶಕ ದೂರು
ಶಶಿಕಲಾ ಮೇಲೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ನಿರ್ದೇಶಕ ದೂರು ನೀಡಿದ್ದಾರೆ. ನಟಿ ಶಶಿಕಲಾ ನನಗೆ ಬೆದರಿಕೆ ಹಾಕಿ ಬಲವಂತದಿಂದ ಮದುವೆ ಆಗಿದ್ದಾರೆ ಎಂದು ಆರೋಪಿಸಿದ್ದಾರೆ. ನಿರ್ದೇಶಕ ಹರ್ಷವರ್ಧನ್ ದೂರಿನಲ್ಲಿ ಹಲವು ವಿಷಯಗಳನ್ನು ಉಲ್ಲೇಖಿಸಿದ್ದಾರೆ. ನಿಮ್ಮ ಸಿನಿಮಾ ನಿರ್ಮಾಣ ಮಾಡುತ್ತೇನೆ. ನನ್ನ ಜೊತೆ ಸಂಬಂಧದಲ್ಲಿ ಇರಿ ಎಂದು ನಟಿ ಶಶಿಕಲಾ, ಹೇಳಿದ್ದರು. ಅದರೆ, ಮದುವೆ ಆಗುವುದಿಲ್ಲ ಆದರೆ ರಿಲೇಷನ್ನಲ್ಲಿ ಇರುತ್ತೇನೆ ಎಂದು ಒಪ್ಪಿಕೊಂಡೆ. ಆ ನಂತರ ಬೆದರಿಕೆ ಹಾಕಿ ಮದುವೆ ಸಹ ಆಗಿದ್ದೆ. ಆದರೆ ಮನೆಗೆ ಆಗಾಗ್ಗೆ ನಿರ್ದೇಶಕರು, ನಿರ್ಮಾಪಕರು ಬರುತ್ತಿದ್ದರು. ಇದೆಲ್ಲ ಸರಿ ಬರದೆ ಹರ್ಷವರ್ಧನ್, ಶಶಿಕಲಾರನ್ನು ತ್ಯಜಿಸಿದ್ದೆ ಎಂದು ಆರೋಪಿಸಿದ್ದಾರೆ.
ಆನಂತರ ತಾಯಿಯೂ ತನ್ನ ಜೊತೆ ಇರುತ್ತಾಳೆ ಎಂಬ ಕಾರಣಕ್ಕೆ ಮತ್ತೆ ನಟಿ ಶಶಿಕಲಾ ಜೊತೆಗೆ ವಾಸ ಮಾಡಲು ಹರ್ಷ ಒಪ್ಪಿಕ್ಕೊಂಡಿದ್ದರು. ಆದರೆ, ತಾಯಿಯನ್ನೂ ಶಶಿಕಲಾ ಹೊರ ಹಾಕಿದ್ದಾರೆ. ಅಲ್ಲದೇ, ಬೆದರಿಕೆ ಹಾಕುತ್ತಿದ್ದಾರೆ ಎಂದು ನಿರ್ದೇಶಕ ಹರ್ಷ, ನಟಿಯ ಜೊತೆಗೆ ಅರುಣ್ ಕುಮಾರ್ ಎಂಬ ವ್ಯಕ್ತಿಯ ವಿರುದ್ಧ ದೂರು ಸಲ್ಲಿಸಿದ್ದಾರೆ.