ಬೆಂಗಳೂರು: ದಾರಿಯಲ್ಲಿ ಸಿಕ್ಕ ಶ್ವಾನವನ್ನು ಠಾಣೆಯಲ್ಲಿ ಒಂದು ದಿನ ನೋಡಿಕೊಂಡು ಪೊಲೀಸರು ಮೂಲ ಮಾಲೀಕರನ್ನು ಹುಡುಕಿ ಒಪ್ಪಿಸಿದ್ದಾರೆ.
ಪೊಲೀಸರ ಈ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವ್ಯಕ್ತಿಯೊಬ್ಬರು ದಾರಿಯಲ್ಲಿ ಸಿಕ್ಕ ಶ್ವಾನವನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡು ಸಾಕಿದ್ದರು. ಆದರೆ, ಅದನ್ನು ಸಾಕಲು ಆಗಲಾರದೆ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದರು. ಆ ವ್ಯಕ್ತಿ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ಶ್ವಾನವನ್ನು ಒಪ್ಪಿಸಿದ್ದರು.
ಠಾಣೆಯ ಸಿಬ್ಬಂದಿಗಳು ಒಂದು ದಿನ ಶ್ವಾನ ನೋಡಿಕೊಂಡು ಆರೈಕೆ ಮಾಡಿದ್ದಾರೆ. ನಂತರ ಮೂಲ ಮಾಲೀಕರನ್ನು ಪತ್ತೆ ಮಾಡಿ, ಮರಳಿ ಕಳುಹಿಸಿದ್ದಾರೆ. ಪೊಲೀಸರ ಜೊತೆ ತುಂಬಾ ಖುಷಿಯಿಂದ ಇದ್ದ ಶ್ವಾನ ನಂತರ ಮೂಲ ಮಾಲೀಕರನ್ನು ಸೇರಿಸಿದೆ. ಈ ವೇಳೆ ಮಾಲೀಕರು ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.