ಬೆಂಗಳೂರು: ಬೆಂಗಳೂರು ನಗರಕ್ಕೆ ಎರಡು ಪೊಲೀಸ್ ಠಾಣೆಗಳನ್ನು(police station) ಸೇರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಆನೇಕಲ್ ಉಪವಿಭಾಗದ ಹೆಬ್ಬಗೋಡಿ ಪೊಲೀಸ್ ಠಾಣೆಯನ್ನು ಆಗ್ನೇಯ ವಿಭಾಗಕ್ಕೆ ಸೇರಿಸಿ ಆದೇಶ ಹೊರಡಿಸಲಾಗಿದೆ. ಅಲ್ಲದೇ, ಹೊಸಕೋಟೆ ಉಪವಿಭೀಗಕ್ಕೆ ಇದ್ದಂತಹ ಆವಲಹಳ್ಳಿ ಪೊಲೀಸ್ ಠಾಣೆಯನ್ನು ವೈಟ್ ಫೀಲ್ಡ್ ವಿಭಾಗಕ್ಕೆ ಸೇರಿಸಿ ಆದೇಶ ಹೊರಡಿಸಲಾಗಿದೆ.
ಆವಲಹಳ್ಳಿ ಮತ್ತು ಹೆಬ್ಬಗೋಡಿ ಈ ಹಿಂದೆ ಬೆಂಗಳೂರು ಗ್ರಾಮಾಂತರ ಪೊಲೀಸರ ಸುಪರ್ಧಿಯಲ್ಲಿತ್ತು. ಈಗ ಈ ಎರಡೂ ಠಾಣೆಗಳನ್ನು ಬೆಂಗಳೂರು ನಗರ ಪೊಲೀಸರ ಸುಪರ್ದಿಗೆ ನೀಡಿ ಆದೇಶ ಹೊರಡಿಸಲಾಗಿದೆ.