ಬೆಂಗಳೂರು: ಖಾಸಗಿ ಬಸ್ ನ್ನೇ ಪ್ರಯಾಣಿಕರು ಬಾರ್ ಮಾಡಿಕೊಂಡಿದ್ದರು ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಖಾಸಗಿ ಬಸ್ ನಲ್ಲಿ ರಾತ್ರಿ ಕುಡಿದು ಸಹ ಪ್ರಯಾಣಿಕರಿಗೆ ತೊಂದರೆ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಕಾಂಗ್ರೆಸ್ ಕಾರ್ಯಕರ್ತೆ ನಜ್ಮಾ ನಜೀರ್ ಆರೋಪಿಸಿದ್ದಾರೆ.
ಬೆಂಗಳೂರಿನಿಂದ ವಿಜಯಪುರಕ್ಕೆ ಮಂಗಳವಾರ ರಾತ್ರಿ ಹೊರಟಿದ್ದ ವೇಳೆ ಸಹ ಪ್ರಯಾಣಿಕರು ತೊಂದರೆ ನೀಡಿದ್ದಾರೆ. ಬಸ್ ನಲ್ಲಿ ಕುಡಿದು, ದೊಡ್ಡ ಧ್ವನಿಯಲ್ಲಿ ಮಾತನಾಡಿ ತೊಂದರೆ ನೀಡಿದ್ದಾರೆ. ಸುಮ್ಮನಿರುವಂತೆ ಪದೇ ಪದೇ ಮಹಿಳಾ ಪ್ರಯಾಣಿಕರು ಮನವಿ ಮಾಡಿದರೂ ಸುಮ್ಮನಾಗಿಲ್ಲ ಎಂದು ನಜ್ಮಾ ನಜೀರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ, ಘಟನೆಯ ಕುರಿತು ಮಹಿಳಾ ಆಯೋಗಕ್ಕೆ ದೂರು ನೀಡಲು ಮುಂದಾಗಿದ್ದಾರೆ.