ಬೆಳಗಾವಿ : ಬೆಳಗಾವಿ ಜಿಲ್ಲೆಯ ಮಾರಿಹಾಳದಲ್ಲಿ ನಡೆದಿದ್ದ ಅಂಕಲ್ -ಆಂಟಿ (uncle-aunty ) ಓಡಿ ಹೋದ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.
ಅಂಕಲ್ ತನ್ನ ಪತ್ನಿಯ ಮಾಂಗಲ್ಯ ಕಿತ್ತುಕೊಂಡು ಓರ್ವ ಮಗನನ್ನು(son) ಕರೆದುಕೊಂಡು ಪರಾರಿಯಾಗಿದ್ದ. ಈ ಕುರಿತು ಪ್ರೆಯಸಿ ಮಾಸಾಬಿಯ ಪತಿ ದೂರು ನೀಡಿದ್ದರು. ದೂರು ನೀಡಿದ ನಂತರ ತನಿಖೆ ನಡೆಸಿದ್ದ ಪೊಲೀಸರು (police) ಇಬ್ಬರನ್ನೂ ಪತ್ತೆ ಹಚ್ಚಿ ಕರೆದುಕೊಂಡು ಬಂದಿದ್ದರು. ಆದರೆ, ಈ ವೇಳೆ ಮಾಸಾಬಿ ನಾನು ಮನಸಾರೆ ಬಸವರಾಜ ಜೊತೆ ಹೋಗಿದ್ದೇನೆ ಎಂದು ಹೇಳಿದ್ದಾಳೆ. ಈ ವೇಳೆ ಬಸವರಾಜ್(basavaraj) ಉಳಿದ ತನ್ನಿಬ್ಬರು ಮಕ್ಕಳನ್ನೂ(children) ಕರೆದುಕೊಂಡು ಹೋಗಿದ್ದಾನೆ. ಈಗ ಆತನ ಪತ್ನಿ(wife) ಕಂಗಾಲಾಗಿದ್ದಾರೆ.
ಈಗ ಆತನ ಪತ್ನಿ ಬೀದಿಗೆ ಬಂದಿದ್ದು, ಆಸ್ತಿ ದಾಖಲೆ ಪತ್ರಗಳು(Property documents) ಮನೆಯಲ್ಲಿದ್ದ 50 ಸಾವಿರ ಹಣ, ಚಿನ್ನಾಭರಣ(gold) ತೆಗೆದುಕೊಂಡು ಹೋಗಿದ್ದಾನೆಂದು ಆರೋಪಿಸಿದ್ದಾರೆ. ಪೊಲೀಸರಿಗೆ ದೂರು ನೀಡಿದರೆ ಸರಿಯಾಗಿ ಕ್ರಮ ಕೈಗೊಳ್ಳುತ್ತಿಲ್ಲ. ನನಗೆ ನ್ಯಾಯ ಒದಗಿಸಬೇಕು ಎಂದು ಮಾಧ್ಯಮಗಳ ಮುಂದೆ ಮನವಿ ಮಾಡಿದ್ದಾರೆ.