ಬೆಂಗಳೂರು: ಕಳೆದ ವಾರ ಬಿಬಿಎಂಪಿ ಕೇಂದ್ರ ಕಚೇರಿ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳು, ಬಿಬಿಎಂಪಿ ಟಿಡಿಅರ್ ಹುತ್ತಕ್ಕೆ ಕೈ ಹಾಕಿದ್ದಾರೆ.
ಸದ್ಯ ಬಿಬಿಎಂಪಿಯ ರಸ್ತೆ ಅಗಲೀಕರಣದ ಹೆಸರಿನಲ್ಲಿ ನೀಡಿದ ಟಿಡಿಅರ್ ಜಾಲ ಭೇದಿಸಲು ಇಡಿ ಅಧಿಕಾರಿಗಳು ಮುಂದಾಗಿದ್ದಾರೆ. ಬಿಬಿಎಂಪಿ ವಲಯಗಳಲ್ಲಿ ಭೂ ಸ್ವಾದೀನ ಹೆಸರಿನಲ್ಲಿ ಎಷ್ಟು ಟಿಡಿಅರ್ ನೀಡಿದ್ದಾರೆ ಎಂಬ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಈ ವಿಷಯವಾಗಿ ಈಗಾಗಲೇ ಯಲಹಂಕ ಸೇರಿದಂತೆ ನಾಲ್ಕು ವಲಯ ಆಯುಕ್ತರಿಗೆ ಇಡಿ ಅಧಿಕಾರಿಗಳು ಸಮನ್ಸ್ ಕೂಡ ಜಾರಿ ಮಾಡಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ ಎಷ್ಟು ಟಿಡಿಅರ್ ನೀಡಿದ್ದೀರಿ? ಟಿಡಿಅರ್ ಮೌಲ್ಯ ಎಷ್ಟು? ರಸ್ತೆ ಅಗಲೀಕರಣದ ಹೆಸರಿನಲ್ಲಿ ಯಾರ ಅಸ್ತಿ ಸ್ವಾಧೀನ ಪಡಿಸಿಕೊಂಡು ಟಿಡಿಅರ್ ನೀಡಲಾಗಿದೆ? ಅಸ್ತಿ ಹಾಗೂ ಭೂ ಮಾಲೀಕರ ಹೆಸರು, ಮಾಹಿತಿ ನೀಡಬೇಕು. ಖುದ್ದು ವಲಯ ಅಯುಕ್ತರು ಹಾಜರಾಗಿ ದಾಖಲೆ ನೀಡಬೇಕು ಎಂದು ಸಮನ್ಸ್ ಜಾರಿ ಮಾಡಲಾಗಿದೆ. ಹೀಗಾಗಿ ವಲಯ ಅಧಿಕಾರಿಗಳಿಗೆ ನಡುಕ ಶುರುವಾಗಿದೆ.