ಬೆಂಗಳೂರು: ಬಿಎಂಟಿಸಿ ಚಾಲಕನೊಬ್ಬ ರೀಲ್ಸ್ ನೋಡುತ್ತಾ ಬಸ್ ಚಲಾಯಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಚಲಿಸುತ್ತಿದ್ದ ಬಸ್ ನಲ್ಲಿಯೇ ಚಾಲಕ ರೀಲ್ಸ್ ನೋಡುತ್ತ ಬಸ್ ಚಲಾಯಿಸಿದ್ದಾರೆ. ರೀಲ್ಸ್ ಸ್ಕ್ರಾಲ್ ಮಾಡುತ್ತಲೇ ಮಾಡುತ್ತಲೇ ಬಸ್ ಚಾಲನೆ ಮಾಡಿದ್ದಾರೆ. ಬಸ್ ನಲ್ಲಿ ಸಾಕಷ್ಟು ಪ್ರಯಾಣಿಕರಿದ್ದರೂ ಅವರ ಜೀವದ ಜೊತೆ ಚೆಲ್ಲಾಟವಾಡಿದ್ದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
ಪೀಕ್ ಅವರ್ ಟ್ರಾಫಿಕ್ ಮಧ್ಯೆಯೇ ಜವಾಬ್ದಾರಿ ಮರೆತು ಚಾಲಕ ಬಸ್ ಚಲಾಯಿಸಿದ್ದಾರೆ. ಹೊಸೂರು ರೋಡ್ ಟು ಲಾಲ್ ಬಾಗ್ ಮಾರ್ಗದ ಕೆಎ 51 ಎಜೆ 7391 ನಂಬರ್ ನ ಬಸ್ ನ ಚಾಲಕ ಈ ರೀತಿ ಬೇಜವಾಬ್ದಾರಿ ಪ್ರದರ್ಶಿಸಿದ್ದಾನೆ. ಮಹಿಳೆಯೊಬ್ಬರು ಚಾಲಕನ ರೀಲ್ಸ್ ಹುಚ್ಚಾಟವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಚಾಲನೆ ಸಮಯದಲ್ಲಿ ಮೊಬೈಲ್ ಬಳಕೆಗೆ ಅವಕಾಶ ಇಲ್ಲದಿದ್ದರೂ ಈ ರೀತಿಯ ನಿರ್ಲಕ್ಷ್ಯ ಎಷ್ಟು ಸರಿ? ಎಂದು ಪ್ರಶ್ನಿಸಿದ ಮಹಿಳೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ, ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.