ಮುಂಬಯಿ: ನಟ ಸೈಫ್ ಅಲಿಖಾನ್(Saif Ali Khan) ಮನೆಗೆ ನುಗ್ಗಿದ ಖದೀಮರು, ಚಾಕು ಇರಿದಿದ್ದಾರೆ. ಸಿಕ್ಕ ಸಿಕ್ಕಲ್ಲಿ ಚಾಕು ಇರಿದ ಹಿನ್ನೆಲೆಯಲ್ಲಿ ಅವರು ಗಂಭೀರವಾಗಿದ್ದು, ಆಸ್ಪತ್ರೆಗೆ(hospital) ದಾಖಲಿಸಲಾಗಿತ್ತು.
ಇಂದು ಬೆಳಗಿನ ಜಾವ ಸೈಫ್ ಅಲಿ ಖಾನ್ ಗೆ ಚಾಕು ಇರಿಯಲಾಗಿದೆ. ಮನೆಯಲ್ಲಿ ಸೈಫ್ ಹಾಗೂ ಕುಟುಂಬಸ್ಥರು ಮಲಗಿದ್ದ ಸಂದರ್ಭದಲ್ಲಿ ನುಗ್ಗಿರುವ ಕಳ್ಳರು, ಕಳ್ಳತನಕ್ಕೆ ಯತ್ನಿಸಿದ್ದಾರೆ. ಈ ವೇಳೆ ಅವರನ್ನು ತಡೆಯಲು ಸೈಫ್ ಅಲಿಖಾನ್ ಮುಂದಾಗಿದ್ದಾರೆ. ಹೀಗಾಗಿ ಖದೀಮರು ಅವರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾರೆ. ಅವರ ಮೇಲೆ ಆರಕ್ಕೂ ಹೆಚ್ಚು ಕಡೆಗಳಲ್ಲಿ ಗಾಯಗಳಾಗಿವೆ. ಸದ್ಯ ಅವರ ಸ್ಥೀತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಸ್ತ್ರ ಚಿಕಿತ್ಸೆ ಕೂಡ ಯಶಸ್ವಿಯಾಗಿದೆ.
ಮುಂಬೈನ ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ್ ಮನೆ ಒಳಗೆ ಕಳ್ಳ ಹೋಗಿದ್ದಾನೆ. ಕೂಡಲೇ ಆತನನ್ನು ಗಮನಿಸಿದ ಮನೆ ಕೆಲಸದವರು ಅವನನ್ನು ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಈ ಗಲಾಟೆಯಿಂದ ಸೈಫ್ ಅಲಿ ಖಾನ್ಗೆ ಎಚ್ಚರ ಆಗಿದ್ದು, ಅವರು ಆಗಮಿಸಿದ್ದಾರೆ. ಆಗ ತಡೆಯಲು ಹೋದ ಸೈಫ್ ಮೇಲೆ ಕಳ್ಳ ಹಲ್ಲೆ ಮಾಡಿದ್ದಾನೆ.
ಕೂಡಲೇ ಸೈಫ್ ಅಲಿಖಾನ್ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ (Lilavati Hospital, Mumbai) ದಾಖಲಿಸಲಾಗಿದೆ. ಹೀಗಾಗಿ ಅವರಿಗೆ ಸರ್ಜರಿಯಾಗಿದೆ. ಸರ್ಜರಿ ವೇಳೆ ಸೈಫ್ ಅಲಿಖಾನ್ ದೇಹದಲ್ಲಿ ಚಾಕುವಿನ ಚೂರು ಕೂಡ ಪತ್ತೆಯಾಗಿದೆ. ವೈದ್ಯರು ಹೊರತೆಗೆದಿದ್ದಾರೆ. ಪ್ರಕರಣದಲ್ಲಿ ಮನೆಯಲ್ಲಿ ಕೆಲಸದವರ ಮೇಲೆ ಅನುಮಾನ ಮೂಡಿದೆ. ಇವರ ಮನೆಗೆ ಎರಡು ಗೇಟ್ಗಳಿವೆ. 4 ಜನ ಗಾರ್ಡ್ಗಳು ಕೆಲಸ ಮಾಡುತ್ತಿದ್ದಾರೆ. ಆದರೂ ಕಳ್ಳ ಹೇಗೆ ಬಂದ ಎಂಬ ಪ್ರಶ್ನೆ ಕಾಡುತ್ತಿದ್ದು, ಸದ್ಯ ಪೊಲೀಸರು(police) ತನಿಖೆ ನಡೆಸುತ್ತಿದ್ದಾರೆ.