ಬೆಳಗಾವಿ: ಜಿಲ್ಲೆಯ (Belagavi) ಜನನಿಬಿಡ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳು ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ.
ಒಂದೇ ದಿನ ಎರಡು ದೈತ್ಯ ಪ್ರಾಣಿಗಳು(Wild Animals) ಕಾಣಿಸಿಕೊಂಡಿದ್ದರಿಂದ ಸುತ್ತಮುತ್ತಲಿನ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಕಾಡು ಪ್ರಾಣಿಗಳು ಸಂಚರಿಸುತ್ತಿರುವ ವಿಡಿಯೋ ಮೊಬೈಲ್ ನಲ್ಲಿ(Mobile) ಸೆರೆಯಾಗಿವೆ.
ಖಾನಾಪೂರ ತಾಲೂಕಿನ ಲೋಂಡಾ-ಕಾಪೋಲಿ ರಸ್ತೆಯಲ್ಲಿ ಬೃಹತ್ ಗಾತ್ರದ ಕಾಡುಕೋಣ ಓಡಾಡಿರುವುದು ಕಂಡು ಬಂದಿದೆ. ಖಾನಾಪೂರ ತಾಲೂಕಿನ ನಂದಗಡ ಗ್ರಾಮದ ಯುವಕ ವಾಹೀದ್ ಎಂಬ ಯುವಕ ಕಾಡುಕೋಣ ಓಡಾಡಿದ ದೃಶ್ಯವನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ.
ಬೃಹತ್ ಗಾತ್ರದ ಕಾಡುಕೋಣ ಪ್ರತ್ಯಕ್ಷವಾಗಿದ್ದು, ರಸ್ತೆ ದಾಟಿ ಮತ್ತೆ ಕಾಡಿನತ್ತ ಪ್ರಯಾಣ ಬೆಳೆಸಿದೆ. ಅಲ್ಲದೇ, ಹುಳಂದ-ಕಣಕುಂಬಿ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷವಾಗಿದೆ. ಇದರಿಂದಾಗಿ ಜನರು ಭಯಭೀತರಾಗಿದ್ದಾರೆ. ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿ ಇತ್ತ ಗಮನ ಹರಿಸಿ, ಪ್ರಾಣಿಗಳನ್ನು ರಕ್ಷಿಸಿ ಮತ್ತೆ ಕಾಡಿಗೆ ಅಟ್ಟಿ, ಜನರು ನೆಮ್ಮದಿಯಿಂದ ಬದುಕಲು ದಾರಿ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.