ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್(Laxmi Hebbalkar) ವಿರುದ್ಧ ಸುವರ್ಣಸೌಧದಲ್ಲಿ ಅಶ್ಲೀಲ ಪದ ಬಳಕೆ ಮಾಡಿದ್ದಾರೆಂಬ ಆರೋಪ ವಿಪಸ ಸದಸ್ಯ ಸಿ.ಟಿ. ರವಿ (CT Ravi) ಮೇಲಿದೆ. ಈ ಪ್ರಕರಣವನ್ನು ಈಗಾಗಲೇ ಸರ್ಕಾರ ಸಿಐಡಿಗೆ ವಹಿಸಿದ್ದು, ತನಿಖೆ ಆರಂಭವಾಗಿದೆ.
ಪರಿಷತ್ನ ಬಿಜೆಪಿ ಸದಸ್ಯರಾದ ಎಸ್.ವಿ.ಸಂಕನೂರ್(SV Sankanur) ಮತ್ತು ಡಿಎಸ್ ಅರುಣ್ ಕಿಶೋರ್ ಕುಮಾರ್ (DS Arun Kishore Kumar) ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಸಿಐಡಿ ಕಚೇರಿಗೆ ಸಿ.ಟಿ.ರವಿ ವಿಚಾರಣೆಗೆ ಹಾಜರಾಗಿದ್ದರು.
ಈ ವೇಳೆ ಮಾತನಾಡಿದ ಅವರು, ನನ್ನ ಮೇಲಿನ ಹಲ್ಲೆ ನಡೆದಿರುವ ಕುರಿತು ಸಭಾಪತಿಗೆ ದೂರು ನೀಡಿದ್ದರು. ಈ ಕುರಿತು ತನಿಖೆ ನಡೆಸಲು ಸಭಾಪತಿ ಸೂಚಿಸಿದ್ದರು. ಹೀಗಾಗಿ ಇಂದು ಈ ಕುರಿತು ಸಿಐಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಅವರ ದೂರು ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಅದಕ್ಕೆ ಸಂಭವಿಸಿದ ಹಾಗೆ, ವ್ಯಾಪ್ತಿ ನಿರ್ಧಾರ ಮಾಡಿಲ್ಲ. ಅದಕ್ಕೆ ಕರೆದರೂ ಬರುತ್ತೇನೆ ಎಂದು ಹೇಳಿದ್ದಾರೆ.
ಡಿ.19ರಂದು ಸುವರ್ಣಸೌಧದಲ್ಲಿ (Suvarnasoudha) ಸಿ.ಟಿ.ರವಿ ಮೇಲೆ ಹಲ್ಲೆಗೆ ಯತ್ನಿಸಲಾಗಿತ್ತು. ಪರಿಷತ್ ಸಭಾಪತಿಗೆ ಮೂವರು ಬಿಜೆಪಿ ಸದಸ್ಯರು ದೂರು ನೀಡಿದ್ದರು. ಆನಂತರ ಈ ಕುರಿತು ಬೆಳಗಾವಿಯ ಹಿರೇಬಾಗೇವಾಡಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹಿರೇಬಾಗೇವಾಡಿ ಠಾಣೆಯಿಂದ ಕೇಸ್ ನ್ನು ಸಿಐಡಿಗೆ ವರ್ಗಾವಣೆಯಾಗಿತ್ತು. ಹೀಗಾಗಿ ವಿಚಾರಣೆಗೆ ಹಾಜರಾಗಲು ಸಿ.ಟಿ. ರವಿಗೆ ಸಿಐಡಿ ನೋಟಿಸ್ ನೀಡಿತ್ತು.
2ನೇ ನೋಟಿಸ್ ಗೆ ಪ್ರತಿಯಾಗಿ ಸಿ.ಟಿ. ರವಿ ಇಂದು ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಈ ಪ್ರಕರಣದ ದೂರುದಾರರಿಗೂ ವಿಚಾರಣೆಗೆ ಹಾಜರಾಗಲು ಸಿಐಡಿ ನೋಟಿಸ್ ನೀಡಿತ್ತು. ಅವರು ಕೂಡ ವಿಚಾರಣೆಗೆ ಹಾಜರಾಗಿದ್ದಾರೆ.