ವಾಹನಗಳನ್ನು ಅಪಘಾತದ(accedent) ರೀತಿಯಲ್ಲಿ ಟಚ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಜಮೀಲ್ ಖಾನ್ ನನ್ನು ಜಯನಗರ ಪೊಲೀಸರು(Police) ಬಂಧಿಸಿದ್ದಾರೆ. ಬಂಧಿತ ಆರೋಪಿಯು ಶ್ರೀನಿವಾಸ್(srinivas) ಎಂಬುವವರಿಗೆ ಒಂದು ಲಕ್ಷ ರೂ. ವಂಚಿಸಿದ್ದ. ಕಳೆದ ವರ್ಷದ ನ. 14ರಂದು ಕನಕಪುರ(kanakpura) ರಸ್ತೆಯಲ್ಲಿರುವ ಜೆಎಸ್‌ಎಸ್ ವೃತ್ತದಲ್ಲಿ(jss circle) ಈ ಘಟನೆ ನಡೆದಿತ್ತು.
ಶ್ರೀನಿವಾಸ್ ಎಂಬುವವರು ತಮ್ಮ ಪತ್ನಿ ಜೊತೆಗೆ ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಆರೋಪಿ ಹಿಂದಿನಿಂದ ತನ್ನ ಬೈಕ್ ನಿಂದ ಟಚ್ ಮಾಡಿದ್ದಾನೆ. ಆನಂತರ ಕಾರು ನಿಲ್ಲಿಸಿ, ನಿಮ್ಮ ಕಾರು ನನ್ನ ಬೈಕ್ ಗೆ ಡಿಕ್ಕಿಯಾಗಿದೆ ಎಂದು ಜಗಳವಾಡಿದ್ದಾನೆ.
ಘಟನೆಯಿಂದಾಗಿ ಬೈಕ್ ನಲ್ಲಿದ್ದ ಮಗು ಸ್ಥಿತಿ ಗಂಭೀರವಾಗಿದೆ. ಅದಕ್ಕೆ ಹಣ (money)ನೀಡಬೇಕು ಎಂದು ಗಲಾಟೆ ಮಾಡಿ ಬೆದರಿಕೆ ಹಾಕಿ ಬಲವಂತವಾಗಿ ಹಣ ಹಾಕಿಸಿಕೊಂಡಿದ್ದಾನೆ. ಘಟನೆಯ ನಂತರ ಶ್ರೀನಿವಾಸ್ ಜಯನಗರ ಠಾಣೆಗೆ ದೂರು ನೀಡಿದ್ದರು. ತನಿಖೆಯಲ್ಲಿ ಆರೋಪಿಯ ಕೃತ್ಯ ಬಯಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ.