ಪೀಣ್ಯ ಪೊಲೀಸ್ ಠಾಣಾ (Police Station)ವ್ಯಾಪ್ತಿಯಲ್ಲಿ ಮೂವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಗಂಗರಾಜು ಎಂಬಾತನನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.
ಆರೋಪಿ ಗಂಗರಾಜು(Gangaraju) ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಭೀಕರವಾಗಿ ನಿನ್ನೆ(ಜ.8)ರಂದು ಹತ್ಯೆ ಮಾಡಿ ಪೊಲೀಸರ (Police) ಮುಂದೆ ಶರಣಾಗಿದ್ದಾನೆ. ಈ ಘಟನೆಯ ಸುದ್ದಿ ಕೇಳಿ ಇಡೀ ಸಿಲಿಕಾನ್ ಸಿಟಿಯ (Silicon City) ಜನರು ಬೆಚ್ಚಿ ಬಿದ್ದಿದ್ದಾರೆ. ಕೊಲೆಯಾಗಿರುವ ಭಾಗ್ಯಮ್ಮ ಮತ್ತು ಆರೋಪಿ ಗಂಗರಾಜು ಇಬ್ಬರೂ ಎರಡನೇ ಮದುವೆಯಾಗಿದ್ದರು. ಇಬ್ಬರು ಮೊದಲ ಪತ್ನಿ ಹಾಗೂ ಮೊದಲ ಪತಿಯಿಂದ ಡಿವೋರ್ಸ್ ಪಡೆಯದೆ ಲೀವಿಂಗ್ ಇನ್ ರಿಲೇಷನ್ ಶಿಪ್ ನಲ್ಲಿದ್ದರು.
ಭಾಗ್ಯಮ್ಮಗೆ ಮಗಳಿದ್ದರೂ ಸಜ ಜೀವನ ನಡೆಸಲು ಗಂಗರಾಜು ಒಪ್ಪಿಗೆ ಸೂಚಿಸಿದ್ದ. ಆದರೆ, ಇತ್ತೀಚೆಗೆ ಆರೋಪಿ ಗಂಗರಾಜು, ಭಾಗ್ಯಮ್ಮ ಸೇರಿದಂತೆ ಇಬ್ಬರು ಹೆಣ್ಣು ಮಕ್ಕಳ ಮೇಲೆ ಅನುಮಾನ(Doubt) ಪಡುತ್ತಿದ್ದ. ಪತ್ನಿ ಹಾಗೂ ಮಗಳಿಗೂ ಅಕ್ರಮ ಸಂಬಂಧ ಇದೆ ಎಂದು ಜಗಳ ಮಾಡುತ್ತಿದ್ದ. ಇತ್ತೀಚೆಗೆ ಅವರ ಮನೆಗೆ ಬಂದಿದ್ದ ಭಾಗ್ಯಮ್ಮಳ ಅಕ್ಕನ ಮಗಳ ಮೇಲೆಯೂ ಅನುಮಾನ ಪಡುತ್ತಿದ್ದ. ಇದೇ ವಿಷಯಕ್ಕೆ ಭಾಗ್ಯಮ್ಮ, ಮಕ್ಕಳು ಹಾಗೂ ಗಂಗರಾಜು ಮಧ್ಯೆ ಜಗಳ ನಡೆದಿದೆ.
ಗಲಾಟೆಯ ನಂತರ ಮೂವರ ಕೊಲೆಗೆ (Murder) ಸಂಚು ರೂಪಿಸಿದ್ದಾನೆ. ಬುಧವಾರ ಗಲಾಟೆ ನಡೆಯುತ್ತಿದ್ದಂತೆ ಹೆಸರುಘಟ್ಟಕ್ಕೆ ರೈತರ ಸಂತೆಗೆ ಹೋಗಿ ಮಚ್ಚು ಖರೀದಿಸಿದ್ದಾನೆ. ಆನಂತರ ನೇರವಾಗಿ ಮನೆಗೆ ಬಂದು ಮೊದಲು ಮಕ್ಕಳನ್ನು ಕೊಲೆ ಮಾಡಿ, ಹೊರಗೆ ಹೋಗಿದ್ದ ಪತ್ನಿಗಾಗಿ ಕಾಯುತ್ತ ನಿಂತಿದ್ದಾನೆ. ಮನೆಗೆ ಬಂದ ಪತ್ನಿ, ಮಕ್ಕಳ ಶವ ಕಂಡು ಕಿರುಚಾಡುತ್ತಿದ್ದಂತೆ ಅವರ ಮೇಲೆಯೂ ದಾಳಿ ಮಾಡಿ ಹತ್ಯೆ ಮಾಡಿದ್ದಾನೆ.
ಕೊಲೆಯಾದವರನ್ನು ನವ್ಯ(19), ಹೇಮಾವತಿ (22), ಭಾಗ್ಯಮ್ಮ (38) ಎನ್ನಲಾಗಿದೆ. ಸದ್ಯ ಆರೋಪಿ ಗಂಗರಾಜು ಪೊಲೀಸರಿಗೆ ಶರಣಾಗಿದ್ದಾನೆ. ಪೀಣ್ಯ ಪೊಲೀಸರು ಆರೋಪಿ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.