ವಂಚನೆ ಪ್ರಕರಣದಲ್ಲಿ ಅರೆಸ್ಟ್ ಆಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಐಶ್ವರ್ಯಾ ಗೌಡ ಹಾಗೂ ಪತಿಯನ್ನು ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ.
ಆರ್ ಆರ್ ನಗರದಲ್ಲಿ ದಾಖಲಾಗಿದ್ದ ಮತ್ತೊಂದು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಶ್ವರ್ಯಗೌಡ ಹಾಗೂ ಪತಿ ಹರೀಶ್ ರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಈ ಹಿಂದೆ ಚಂದ್ರ ಲೇಔಟ್ ಪ್ರಕರಣದಲ್ಲಿ ಆರೋಪಿಗಳು ಅರೆಸ್ಟ್ ಆಗಿದ್ದರು. ಆನಂತರ ಜಾಮೀನು ಪಡೆದು ಆರೋಪಿಗಳು ಹೊರ ಬಂದಿದ್ದರು. ಈಗ ಮತ್ತೊಮ್ಮೆ ವಂಚಕ ದಂಪತಿಯನ್ನು ಪೊಲೀಸರು ಮತ್ತೊಂದು ಪ್ರಕರಣದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.