ಕೋಲಾರ: ವಿವಾಹವಾಗಿದ್ದರೂ ಮತ್ತೋರ್ವ ಮಹಿಳೆಯ ಮದುವೆಯಾಗಲು ಮುಂದಾದ ವ್ಯಕ್ತಿಯನ್ನು ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ.
ನಗರದ ನೂರ್ ನಗರದಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ. ಉಸ್ಮಾನ್ ಕೊಲೆಯಾಗಿರುವ ವ್ಯಕ್ತಿ. ಸಾವನ್ನಪ್ಪಿರುವ ವ್ಯಕ್ತಿ ಮಧ್ಯರಾತ್ರಿ ಪ್ರೆಯಸಿಯ ಮನೆಗೆ ಹೋಗಿ ಮರಳಿ ತೆರಳುತ್ತಿದ್ದ ವೇಳೆ ಕುಟುಂಬಸ್ಥರು ಹಾಗೂ ಸ್ಥಳೀಯರು ಅಟ್ಟಾಡಿಸಿ ಹೊಡೆದಿದ್ದಾರೆ. ಈ ವೇಳೆ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಉಸ್ಮಾನ್ ಕಳೆದೆ ಐದು ವರ್ಷಗಳ ಹಿಂದೆ ಜಬೀನಾ ಎಂಬ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ, ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಆನಂತರ ಆತ ಜಬೀನಾ ಸಂಬಂಧಿಯಾಗಿರುವ ಮಹಿಳೆಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾನೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಪತ್ನಿ, ತವರು ಮನೆ ಸೇರಿದ್ದರು.
ಈತ ರಾತ್ರಿ ವೇಳೆ ಪ್ರೆಯಸಿಯ ಮನೆಗೆ ಹೋಗಿ, ಮದುವೆಯ ಬಗ್ಗೆಯೂ ಮಾತನಾಡಿದ್ದಾನೆ ಎನ್ನಲಾಗಿದೆ. ಮರಳಿ ಹೋಗುತ್ತಿದ್ದ ವೇಳೆ ಆತನನ್ನು ಥಳಿಸಲಾಗಿದೆ. ಈ ಕುರಿತು ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.