ಹಳದಿ ಮಾರ್ಗದ ಮೆಟ್ರೋ ಉದ್ಘಾಟನೆ ಮತ್ತಷ್ಟು ವಿಳಂಬವಾಗುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಬೇಸರ ವ್ಯಕ್ತಪಡಿಸಿರುವ ಅವರು, 2024ರಲ್ಲೇ ಉದ್ಘಾಟನೆ ಆಗಲಿದೆ ಎಂಬ ಡೆಡ್ ಲೈನ್ ಇತ್ತು. ಈಗಾಗಲೇ ಮೆಟ್ರೋ ಮಾರ್ಗದ ಸ್ಟೇಷನ್ ವರ್ಕ್ ಕೂಡ ಮುಗಿದಿದೆ. ಆದರೆ, ರೈಲುಗಳ ಪೂರೈಕೆ ಸಮರ್ಪಕವಾಗಿ ಆಗದ ಕಾರಣ ಹಳದಿ ಮಾರ್ಗದ ಮೆಟ್ರೋ ಉದ್ಘಾಟನೆಯಲ್ಲಿ ವಿಳಂಬವಾಗುತ್ತಿದೆ ಎಂದಿದ್ದಾರೆ.
ಆದರೆ, ಇದೇ ವರ್ಷದ ಮುಂದಿನ ಕೆಲವು ತಿಂಗಳುಗಳಲ್ಲಿ ಮೆಟ್ರೋ ಸಂಚಾರಕ್ಕೆ ಪ್ರಯತ್ನ ಮಾಡಲಾಗುತ್ತಿದೆ. ನಮ್ಮ ಮೆಟ್ರೋ ಹಳದಿ ಮಾರ್ಗದ ಕಾರ್ಯಾಚರಣೆಯ ಪ್ರಾರಂಭವು BMRCL ನೀಡಿದ ಎಲ್ಲಾ ಗಡುವನ್ನು ಪೂರೈಸುವಲ್ಲಿ ವಿಫಲವಾಗಿದೆ. ಇದು ನಮ್ಮೆಲ್ಲರನ್ನು ನಿರಾಶೆಗೊಳಿಸಿದೆ. ರೈಲುಗಳ ಅಲಭ್ಯತೆಯೇ ಕಾರ್ಯಾಚರಣೆ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ಮುಂದಿನ ದಿನಗಳ್ಲಲಿ ಒಳ್ಳೆಯ ಸುದ್ದಿಗಳನ್ನು ನೀಡಲಾಗುವುದು ಎಂದಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ, ಉತ್ಪಾದನೆಯನ್ನು ತ್ವರಿತಗೊಳಿಸವಂತೆ ಮನವಿ ಮಾಡಲಾಗಿದೆ. ರೈಲು ತಯಾರಕರಾದ ಟಿಟಾಗಢ್ ರೈಲ್ ಸಿಸ್ಟಮ್ಸ್ ನೊಂದಿಗೆ ನಿರಂತರವಾಗಿ ಸಂಪರ್ಕ ಹೊಂದಲಾಗಿದೆ.
ಎಂಜಿನಿಯರ್‌ಗಳಿಗೆ ವೀಸಾ ಸೇರಿದಂತೆ ಹಲವು ರಸ್ತೆ ತಡೆಗಳನ್ನು ಪರಿಹರಿಸಲಾಗಿದೆ. ಜ. 6ರಂದು ಬೆಂಗಳೂರಿಗೆ ಕಳುಹಿಸಲು ಮೊದಲ ರೈಲು ಸಿದ್ಧವಾಗಿದೆ. ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಎರಡನೇ ರೈಲು ಆಗಮಿಸಲಿದೆ. ಏಪ್ರಿಲ್‌ನಲ್ಲಿ ಮೂರನೇ ರೈಲನ್ನು ತಲುಪಿಸಲು ತಿತಾಗಢ್ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಆನಂತರ ತಿಂಗಳಿಗೆ ಒಂದರಂತೆ ರೈಲುಗಳನ್ನು ಕಳುಹಿಸಲಾಗುವುದು ಎಂದು ಸಂಸ್ಥೆ ಹೇಳಿದೆ. ಮೊದಲ ಮೂರು ರೈಲುಗಳು ಬೆಂಗಳೂರು ತಲುಪಿದ ನಂತರ ಯೆಲ್ಲೋ ಮಾರ್ಗದ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಸಂಸದರು ಹೇಳಿದ್ದಾರೆ.