ಮಾಜಿ ಸಂಸದರ ನಕಲಿ ತಂಗಿ ಐಶ್ವರ್ಯಾಗೌಡಗೆ ಸಂಬಂಧಿಸಿದ ಐಷಾರಾಮಿ ಕಾರುಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಮಾಜಿ ಸಂಸದ ಡಿ.ಕೆ. ಸುರೇಶ್ ತಂಗಿ ಎಂದು ಹೇಳಿಕೊಂಡು ಐಶ್ವರ್ಯಾಗೌಡ ಚಿನ್ನದ ಅಂಗಡಿ ಮಾಲೀಕರಿಂದ ಚಿನ್ನ ಪಡೆದು ಲಕ್ಷಾಂತರ ರೂ. ವಂಚಿಸಿದ್ದರು. ಅಲ್ಲದೇ, ಅದೇ ರೀತಿ ಐಶ್ವರ್ಯಾಗೌಡ ಹಾಗೂ ಪತಿ ಬೇರೆ ಬೇರೆ ಜನರಿಗೆ ವಂಚಿಸಿದ್ದರು ಎಂಬ ದೂರುಗಳು ಕೇಳಿ ಬಂದಿದ್ದವು.
ಚಿನ್ನಾಭರಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಾಗಿತ್ತು. ಹೀಗಾಗಿ ಪೊಲೀಸರು ದಂಪತಿಗಳನ್ನು ಅರೆಸ್ಟ್ ಮಾಡಿದ್ದರು. ಹೈಕೋರ್ಟ್ ಜಾಮೀನು ನೀಡಿದ್ದರಿಂದಾಗಿ ಈಗ ದಂಪತಿ ಜೈಲಿನಿಂದ ಹೊರ ಬಂದಿದ್ದಾರೆ. ಆದರೆ, ತನಿಖೆ ಮುಂದುವರೆಸಿರುವ ಆರ್ ಆರ್ ನಗರ ಪೊಲೀಸರಿಂದ ಐಶ್ವರ್ಯಾಗೆ ಸಂಬಂಧಿಸಿದ ಮೂರು ಐಷಾರಾಮಿ ಕಾರುಗಳನ್ನು ಸೀಜ್ ಮಾಡಲಾಗಿದೆ.
ಐಶ್ವರ್ಯ ಪತಿ ಹರೀಶ್ ಹೆಸರಿನಲ್ಲಿದ್ದ ಮೂರು ಐಷಾರಾಮಿ ಕಾರುಗಳನ್ನು ಎಸಿಪಿ ಭರತ್ ರೆಡ್ಡಿ ಮತ್ತು ತಂಡದಿಂದ ಸೀಜ್ ಮಾಡಲಾಗಿದೆ. ಆಡಿ , ಬಿಎಂಡಬ್ಲ್ಯೂ,ಹಾಗೂ ಫಾರ್ಚುನರ್ ಕಾರುಗಳನ್ನು ಸೀಜ್ ಮಾಡಲಾಗಿದೆ. KA01 MY 8585 ನಂಬರಿನ ಆಡಿ, KA1 MB8555 ಬಿಎಂಡಬ್ಲ್ಯೂ ಹಾಗೂ KA05NL3567 ಫಾರ್ಚುನರ್ ಕಾರುಗಳನ್ನು ಸೀಜ್ ಮಾಡಲಾಗಿದೆ.