ಬಿಎಂಟಿಸಿ ನೌಕರರಿಗೆ ಬಿಗ್ ಶಾಕ್ ಎದುರಾಗಿದ್ದು, ನೌಕರರ ಮುಷ್ಕರಕ್ಕೆ ನಿರ್ಬಂಧ ಹೇರಲಾಗಿದೆ.
ಡಿ. 31 ರಿಂದ ಮುಷ್ಕರಕ್ಕೆ ಮುಂದಾದ ನೌಕರರ ಮೇಲೆ ಬಿಎಂಟಿಸಿ ಅಧಿಕಾರಿಗಳು ಬ್ರಹ್ಮಾಸ್ತ್ರ ಹೂಡಿದ್ದಾರೆ. ಅಲ್ಲದೇ, ಮುಷ್ಕರದಲ್ಲಿ ಭಾಗವಹಿಸದಂತೆ ಬಿಎಂಟಿಸಿ ಆಡಳಿತ ಮಂಡಳಿ ಸಿಬ್ಬಂದಿಗೆ ಅಧಿಸೂಚನೆ ಹೊರಡಿಸಿದೆ.
ಅತ್ಯಾವಶ್ಯಕ ಸೇವೆಗಳ ಅಧಿನಿಯಮ 2013 ರನ್ವಯ ಬಿಎಂಟಿಸಿ ಸೇವೆ ಅತ್ಯಾವಶ್ಯಕ. ಮುಂದಿನ ಆರು ತಿಂಗಳು ನೌಕರರು ಮುಷ್ಕರ ಮಾಡುವಂತಿಲ್ಲ. ಜನವರಿ 1 ರಿಂದ ಅನ್ವಯವಾಗುವಂತೆ ಆರು ತಿಂಗಳು ಬಿಎಂಟಿಸಿ ನೌಕರರ ಮುಷ್ಕರಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಬಿಎಂಟಿಸಿ ಭದ್ರತಾ ಮತ್ತು ಜಾಗೃತಾಧಿಕಾರಿ ಆದೇಶ ಹೊರಡಿಸಿದ್ದಾರೆ.