ಆಧಾರ್ ಕಾರ್ಡ್ ನಲ್ಲಿ ನಿಮ್ಮ ಮಾಹಿತಿ 10 ವರ್ಷಕ್ಕಿಂತ ಹಳೆಯದಾಗಿದೆಯೇ? ಆನ್ಲೈನ್ನಲ್ಲಿಅವಕಾಶವಿದ್ದರೂ ಇನ್ನೂ ಅಪ್ಡೇಟ್ ಮಾಡಿಲ್ಲವೇ? ಹೆಸರು, ವಿಳಾಸ ತಪ್ಪಾಗಿದೆ, ಏನು ಮಾಡಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಾದ್ರೆ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಜನರಿಗೆ ಸಿಹಿ ಸುದ್ದಿ ನೀಡಿದೆ. ಆನ್ಲೈನ್ನಲ್ಲಿಉಚಿತವಾಗಿ ಅಪ್ಡೇಟ್ ಮಾಡುವ ಡೆಡ್ಲೈನ್ಅನ್ನು ಜೂನ್ 14ರವರೆಗೆ ವಿಸ್ತರಿಸಲಾಗಿದೆ. ಇದರಿಂದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಸರಕಾರದ ಯೋಜನೆಗಳ ಲಾಭ ಪಡೆಯಲು, ಐಟಿ ರಿಟರ್ನ್ಸ್ ಮಾಡಲು, ಬ್ಯಾಂಕ್ ಖಾತೆ ತೆರೆಯಲು ಸೇರಿ ಹತ್ತಾರು ಚಟುವಟಿಕೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ವಿಮಾನ, ರೈಲು ಟಿಕೆಟ್ ಬುಕ್ ಮಾಡಬೇಕೆಂದರೂ ಈಗ ಆಧಾರ್ ಬೇಕೇಬೇಕು. ಹಾಗಾಗಿ, ಆಧಾರ್ ಕಾರ್ಡ್ನಲ್ಲಿಎಲ್ಲಮಾಹಿತಿ ನಿಖರವಾಗಿರಬೇಕು. ಆನ್ಲೈನ್ನಲ್ಲೇ ಉಚಿತವಾಗಿ ಅಪ್ಡೇಟ್ ಮಾಡಬಹುದು. ಹಾಗಾದರೆ, ಆನ್ಲೈನ್ನಲ್ಲೇ ಹೇಗೆ ಸುಲಭವಾಗಿ ಅಪ್ಡೇಟ್ ಮಾಡಬೇಕು ಎಂಬ ಪ್ರಶ್ನೆ ಕಾಡುತ್ತಿದೆಯೇ? ಇಲ್ಲಿದೆ ಸುಲಭವಾಗಿ ಅಪ್ಡೇಟ್ ಮಾಡುವ ವಿಧಾನ.
ಯಾವ ರೀತಿ ಅಪ್ಡೇಟ್ ಮಾಡಬೇಕು ಗೊತ್ತಾ?
- myaadhaar.uidai.gov.in ಗೆ ತೆರಳಿ
- ಮೈ ಆಧಾರ್ ಮೇಲೆ ಕ್ಲಿಕ್ ಮಾಡಿ, ಅಪ್ಡೇಟ್ ಯುವರ್ ಆಧಾರ್ ಆಯ್ಕೆ ಮಾಡಿ
- ಅಪ್ಡೇಟ್ ಆಧಾರ್ ಡಿಟೇಲ್ಸ್ ಮೇಲೆ ಕ್ಲಿಕ್ ಮಾಡಿ, ಡಾಕ್ಯುಮೆಂಟ್ ಅಪ್ಡೇಟ್ ಸೆಲೆಕ್ಟ್ ಮಾಡಿಕೊಳ್ಳಿ
- ಆಧಾರ್ ಸಂಖ್ಯೆ ನಮೂದಿಸಿ, ಕ್ಯಾಪ್ಚಾ ಕೋಡ್ ಹಾಕಿ, ಸೆಂಡ್ ಒಟಿಪಿ ಮೇಲೆ ಕ್ಲಿಕ್ ಮಾಡಿ
- ಒಟಿಪಿಯೊಂದಿಗೆ ಲಾಗ್ ಇನ್ ಆಗಿ
- ಅಪ್ಡೇಟ್ ಮಾಡುವ ಹೆಸರು, ವಿಳಾಸ, ಜನ್ಮದಿನ ಸೇರಿ ವಿವಿಧ ಮಾಹಿತಿ ಆಯ್ಕೆ ಮಾಡಿ
- ಬೇಕಾಗಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಸಬ್ಮಿಟ್ ಅಪ್ಡೇಟ್ ರಿಕ್ವೆಸ್ಟ್ ಮೇಲೆ ಕ್ಲಿಕ್ ಮಾಡಿ
ಕೆಲವೇ ಕೆಲವು ನಿಮಿಷಗಳಲ್ಲಿ ಆನ್ ಲೈನ್ ಮೂಲಕ ಆಧಾರ್ ಅಪ್ಡೇಟ್ ಮಾಡಬಹುದಾಗಿದೆ. ನಿಮ್ಮ ಕಂಪ್ಯೂಟರ್ ಗಳಲ್ಲೇ ಇದನ್ನು ಮಾಡಬಹುದಾಗಿದೆ. ಕಂಪ್ಯೂಟರ್ ಇಲ್ಲದವರು ಹತ್ತಿರದ ಸೈಬರ್ ಕೆಫೆಗಳಿಗೆ ತೆರಳಿ ಅಪ್ ಡೇಟ್ ಮಾಡಿಕೊಳ್ಳಬಹುದಾಗಿದೆ. ಹಾಗಾದರೆ, ಆಧಾರ್ ಅಪ್ಡೇಟ್ ಗೆ ಏನೆಲ್ಲ ದಾಖಲೆಗಳು ಬೇಕು ಎಂಬುದನ್ನೂ ನೋಡಿಕೊಂಡು ಬನ್ನಿ…
ಆಧಾರ್ ಕಾರ್ಡ್ ದೇಶದ ಪ್ರಮುಖ ಗುರುತಿನ ಚೀಟಿಯಾಗಿದ್ದು, ಇದರಲ್ಲಿ ಸಕಾಲಕ್ಕೆ ಮಾಹಿತಿ ಅಪ್ಡೇಟ್ ಆಗಬೇಕು ಎಂಬ ದೃಷ್ಟಿಯಿಂದ ಕೇಂದ್ರ ಸರ್ಕಾರವು ಉಚಿತ ಅಪ್ಡೇಟ್ ಗೆ ಅವಕಾಶ ಮಾಡಿಕೊಟ್ಟಿದೆ. ಫೋಟೊ ಬದಲಾಗಿದ್ದರೆ, ವಿಳಾಸ ತಪ್ಪಾಗಿದ್ದರೆ, ಹೆಸರು ತಪ್ಪಾಗಿದ್ದರೆ, ಬೇರೆ ಊರಿಗೆ ತೆರಳಿ ಅಲ್ಲಿಯೇ ನೆಲೆಸಿದ್ದರೆ, ಅಲ್ಲಿನ ವಿಳಾಸ ಸೇರಿಸಬೇಕೆಂದರೆ ಈಗಲೇ ಅಪ್ ಡೇಟ್ ಮಾಡಿಕೊಂಡರೆ ಅನುಕೂಲವಾಗುತ್ತದೆ.
ಕೇಂದ್ರ ಸರ್ಕಾರವು ಜೂನ್ 14ರವರೆಗೆ ಮಾತ್ರ ಉಚಿತವಾಗಿ ಅಪ್ಡೇಟ್ ಮಾಡಲು ಅವಕಾಶ ಮಾಡಿಕೊಟ್ಟಿದೆ. ಇದಾದ ಬಳಿಕ ಶುಲ್ಕ ಪಾವತಿಸಬೇಕಾಗುತ್ತದೆ. ಹಾಗೊಂದು ವೇಳೆ, ನಿಖರ ಮಾಹಿತಿಯೊಂದಿಗೆ ಅಪ್ ಡೇಟ್ ಮಾಡದಿದ್ದರೆ, ಸರ್ಕಾರವು ಆಧಾರ್ ಕಾರ್ಡ್ ಅನ್ನೇ ರದ್ದುಗೊಳಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ, ತಡಮಾಡದೆ ಅಪ್ ಡೇಟ್ ಮಾಡಿಕೊಳ್ಳಿ.