ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಬೆನ್ನು ನೋವಿನಿಂದಾಗಿ ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಮಧ್ಯೆ ದರ್ಶನ್ ಗೆ ಜಾಮೀನು ಸಿಕ್ಕಿದ್ದು, ಆಸ್ಪತ್ರೆಯಿಂದಲೂ ಮನೆಗೆ ತೆರಳಿದ್ದಾರೆ.
ಆದರೆ, ಆಸ್ಪತ್ರೆಗೆ ದಾಖಲಾಗಿದ್ದ ಅವರು ಬರೋಬ್ಬರಿ 48 ದಿನಗಳ ಕಾಲ ಚಿಕಿತ್ಸೆ ಪಡೆದಿದ್ದರು. ಬೆನ್ನು ನೋವಿನ ಸರ್ಜರಿಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಂಗೇರಿ ಹತ್ತಿರದ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಹೀಗಾಗಿ ಆಸ್ಪತ್ರೆಯ ಬಿಲ್ ಬಗ್ಗೆ ಈಗ ಚರ್ಚೆಯಾಗುತ್ತಿದೆ.
ಆಸ್ಪತ್ರೆ ಮೂಲಗಳ ಮಾಹಿತಿಯಂತೆ ವಿವಿಐಪಿ ವಾರ್ಡ್, ಫಿಸಿಯೊ ಥೆರಪಿ, ಡಾಕ್ಟರ್ ಕನ್ಸಲ್ಟೇಷನ್ ಫೀಸ್, ಟೆಸ್ಟಿಂಗ್ ರಿಪೋರ್ಟ್ಸ್, ಸ್ಕ್ಯಾನ್, ಎಕ್ಸರೇ ಸೇರಿದಂತೆ ಎಲ್ಲ ರೀತಿಯ ಚೆಕಪ್ ಗಳನ್ನು ಮಾಡಲಾಗಿದೆ. ಹೀಗಾಗಿ ಬಿಲ್ ಸುಮಾರು 17 ಲಕ್ಷ ರೂ. ಆಗಿದೆ ಎನ್ನಲಾಗಿದೆ. ಸರ್ಜರಿ ಆಗದ ಹಿನ್ನೆಲೆಯಲ್ಲಿ ಇಷ್ಟು ಬಿಲ್ ಆಗಿದೆ. ಸರ್ಜರಿಯಾಗಿದ್ದರೆ ಬಿಲ್ ಇನ್ನೂ ಹೆಚ್ಚಾಗುತ್ತಿತ್ತು ಎನ್ನಲಾಗಿದೆ.