ಭಾರತೀಯ ಮಹಿಳಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ರಿಚಾ ಘೋಷ್ ದಾಖಲೆಯ ಅರ್ಧ ಶತಕ ಸಿಡಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಮಹಿಳಾ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ. ರಿಚಾ ಅವರ ಅದ್ಭುತ ಇನ್ನಿಂಗ್ಸ್‌ನ ಹೊರತಾಗಿ, ಸ್ಮೃತಿ ಮಂಧಾನ ಅವರು ಕೂಡ ವಿಶ್ವ ದಾಖಲೆಯ ಅರ್ಧ ಶತಕ ಸಿಡಿಸಿದ್ದಾರೆ. ಪರಿಣಾಮ ಭಾರತ ತಂಡ 217 ರನ್ ಗಳಿಸಿದೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದಿದ್ದ ರಿಚಾ ಆಕರ್ಷಕ ಆಟವಾಡಿದರು. 15ನೇ ಓವರ್ನಲ್ಲಿ ಸ್ಮೃತಿ ಮಂಧಾನ ಔಟಾದ ನಂತರ ಕ್ರೀಸ್ಗೆ ಬಂದ ರಿಚಾ ಎದುರಿಸಿದ ಮೊದಲ ಎಸೆತವನ್ನು ಲಾಂಗ್ ಆಫ್ ಕಡೆಗೆ ಅದ್ಭುತ ಸಿಕ್ಸರ್ ಸಿಡಿಸಿದರು.
ನಂತರವೂ ಭರ್ಜರಿ ಆಟದೊಂದಿಗೆ ರಿಚಾ 3 ಬೌಂಡರಿ ಮತ್ತು 5 ಸಿಕ್ಸರ್ ಗಳ ಸಹಾಯದಿಂದ ಟಿ20 ವೃತ್ತಿ ಜೀವನದ ಎರಡನೇ ಅರ್ಧ ಶತಕ ಪೂರ್ಣಗೊಳಿಸಿದರು. ಕೇವಲ 18 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ ರಿಚಾ ಭಾರತದ ಪರ ಅತಿ ವೇಗದ ಅರ್ಧ ಶತಕ ಸಿಡಿಸದ್ದಲ್ಲದೇ, ಅಂತಾರಾಷ್ಟ್ರೀಯ ಮಹಿಳಾ ಟಿ20ಯಲ್ಲಿ ಅತಿವೇಗದ ಅರ್ಧಶತಕದ ದಾಖಲೆಯನ್ನು ಸರಿಗಟ್ಟಿದರು. ರಿಚಾ ಅವರಿಗಿಂತ ಮೊದಲು, ನ್ಯೂಜಿಲೆಂಡ್‌ನ ಅನುಭವಿ ಸೋಫಿ ಡಿವೈನ್ ಮತ್ತು ಆಸ್ಟ್ರೇಲಿಯಾದ ಯುವ ಬ್ಯಾಟ್ಸ್‌ಮನ್ ಫೋಬೆ ಲಿಚ್‌ಫೀಲ್ಡ್ ಕೂಡ ತಲಾ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.
ಅಲ್ಲದೇ, ಈ ವೇಳೆ 21 ಎಸೆತಗಳನ್ನು ಎದುರಿಸಿ 54 ರನ್ ಗಳಿಸಿದರು.